images-20.jpeg
Spread the love

ಶಂಕರನಾರಾಯಣ: ದಿನಾಂಕ: 22-04-2026(ಹಾಯ್ ಉಡುಪಿ ನ್ಯೂಸ್) ತಗ್ಗುಂಜಿ ಉಮಾಮಹೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ನಾಗರಾಜ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆಜ್ರಿ,ತಗ್ಗುಂಜಿ, ಉಮಾಮಹೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ ನಾಗರಾಜ ಶೆಟ್ಟಿ (48) ಎಂಬವರು ಪ್ರತಿ ದಿನ ಉಮಾಮಹೇಶ್ವರ ದೇವಸ್ಥಾನದ ಬಾಗಿಲು ತೆರೆದು ದೇವಸ್ಥಾನದ ಕಾಣಿಕೆ ಹುಂಡಿಯನ್ನು ದೇವಸ್ಥಾನದ ಹೊರ ಪೌಳಿಯಲ್ಲಿ ಇಟ್ಟು ದೇವಸ್ಥಾನವನ್ನು ಸುಚಿ ಗೊಳಿಸಿ ನಂತರ ಸಂಜೆ ಹುಂಡಿಯನ್ನು ದೇವಸ್ಥಾನದ ಒಳಗೆ ಇಟ್ಟು ದೇವಸ್ಥಾನದ ಬಾಗಿಲನ್ನು ಹಾಕುವ ಕೆಲಸವನ್ನು ಮಾಡಿಕೊಂಡಿರುತ್ತಾರೆ.

ದಿನಾಂಕ 20-04-2026 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ ದೇವಸ್ಥಾನದ ಬಾಗಿಲನ್ನು ತೆಗೆದು ದೇವಸ್ಥಾನದ ಆಪೀಸ್ ರೂಂನಲ್ಲಿ ಇಟ್ಟಿರುವ ಹುಂಡಿಯನ್ನು ದೇವಸ್ಥಾನದ ಹೊರ ಪೌಳಿಯಲ್ಲಿ ಇಟ್ಟು ದೇವಸ್ಥಾನವನ್ನು ಸುಚಿ ಗೊಳಿಸುವ ಕೆಲಸಕ್ಕೆ ಹೋಗಿದ್ದು, ನಂತರ ಬೆಳಿಗ್ಗೆ 8:00 ಗಂಟೆ ಸುಮಾರಿಗೆ ದೇವಸ್ಥಾನದ ಹೊರ ಪೌಳಿಗೆ ಬಂದು ನೋಡಿದಾಗ ಹೊರ ಪೌಳಿಯಲ್ಲಿ ಇಟ್ಟಿರುವಂತಹ ಕಾಣಿಕೆ ಹುಂಡಿ ಇಲ್ಲದೇ ಇದ್ದು, ನಾಗರಾಜ ಶೆಟ್ಟಿ ರವರು ದೇವಸ್ಥಾನದ ಸಿಸಿ ಕ್ಯಾಮಾರವನ್ನು ಮಾನೀಟರ್ ಮಾಡುತ್ತಿರುವ ಸೈನ್ ಇನ್ ಸೆಕ್ಯೂರಿಟಿ ರವರಿಗೆ ದೂರವಾಣಿ ಕರೆಮಾಡಿ ದೇವಸ್ಥಾನದ ಪೌಳಿಯಲ್ಲಿ ಇಟ್ಟಿರುವ ಕಾಣಿಕೆ ಹುಂಡಿ ಕಾಣೆಯಾಗಿರುವ ಬಗ್ಗೆ ತಿಳಿಸಿದ್ದು. ಅವರು ಕೂಡಲೇ ಸಿಸಿ ಕ್ಯಾಮರವನ್ನು ಚೆಕ್ ಮಾಡಿ ಬೆಳಿಗ್ಗೆ 7:56 ಗಂಟೆ ಸುಮಾರಿಗೆ ಹೆಲ್ಮೇಟ್ ದರಿಸಿದ ಓರ್ವ ವ್ಯಕ್ತಿ ದೇವಸ್ಥಾನದ ಹೊರ ಪೌಳಿಗೆ ಬಂದು ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು, ಕಾಣಿಕೆ ಹುಂಡಿಯಲ್ಲಿ ಸುಮಾರು 10,000/- ಹಣವಿದ್ದು ಯಾರೋ ಕಳ್ಳರು ದಿನಾಂಕ 20-04-2026 ರಂದು ಬೆಳಿಗ್ಗೆ 7:56 ಗಂಟೆಗೆ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಾಗರಾಜ ಶೆಟ್ಟಿ ತಿಳಿಸಿದ್ದಾರೆ .

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಕಲಂ 331(3) 305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!