ಮಣಿಪಾಲ: ದಿನಾಂಕ:19-04-2026 (ಹಾಯ್ ಉಡುಪಿ ನ್ಯೂಸ್) ಲಕ್ಷ್ಮೀಂದ್ರ ನಗರದ ದಿಲೀಪ್ ಆರ್ ಅಡಿಗ ಎಂಬವರಿಗೆ ಸಿಂಗಾಪುರದ ಕಂಪೆನಿಯವರು ವ್ಯವಹಾರದಲ್ಲಿ ನಂಬಿಸಿ 33 ಕೋಟಿ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ದೀಲಿಪ್ ಆರ್ ಅಡಿಗ (35) ಎಂಬವರು ಲಕ್ಷ್ಮೀಂದ್ರ ನಗರದಲ್ಲಿ ಎಮ್ ಎನ್ ಶೆಟ್ಟಿ ಟೆಕ್ನಾಲಜಿ ಪ್ರೈವೈಟ್ ಲಿಮಿಟೆಡ್ ಕಂಪನಿಯನ್ನು ನಡೆಸಿಕೊಂಡಿದ್ದು ಸಿಂಗಾಪುರ Infomo Global Ptv.Ltd ಕಂಪನಿಯ ಸಿಇಓ ಆನಂದರಾವ್ ಎಂಬವರು ದಿಲೀಪ್ ಆರ್ ಅಡಿಗರಿಗೆ ಕರೆ ಮಾಡಿ ದಿಲೀಪ್ ಆರ್ ಅಡಿಗರ ಕಂಪನಿಯಲ್ಲಿ ತಯಾರಾಗುವ ಸಿ ಎಮ್ ಎಸ್ ಪ್ರೋಡಕ್ಟ್ ನ್ನು ಪಡೆದುಕೊಳ್ಳಲು ಆಸಕ್ತಿ ಇದೆ ಎಂದು ಹೇಳಿ ಪೋನ್ ಮುಖಾಂತರ ಮಾತುಕತೆ ಮಾಡಿ ದಿಲೀಪ್ ಆರ್ ಅಡಿಗರು ಹೇಳಿದ ವ್ಯಾಲ್ಯೂಶೆನ್ ಪಟ್ಟಿಯನ್ನು ಇಮೇಲ್ ಮುಖಾಂತರ ನೋಡಿ ದಿನಾಂಕ:06.10.2019 ರಂದು 35 ಲಕ್ಷ ನಗದು ರೂಪಾಯಿ ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಈ ಶೇರ್ ಗೆ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಶೇರ್ 3 ವರ್ಷದಲ್ಲಿ 9 ಸಾವಿರ ಕೋಟಿ ಆಗುವುದಾಗಿ ಸುಳ್ಳು ಮಾಹಿತಿಯನ್ನು ನೀಡಿ ದಿನಾಂಕ:05.04.2020 ರಂದು ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಕಳುಹಿಸಿಕೊಟ್ಟಿದ್ದು ಅಗ್ರಿಮೆಂಟ್ ನಂತೆ ವ್ಯವಹಾರ ಮಾಡಿಕೊಂಡಿದ್ದು ಈ ಅಗ್ರಿ ಮೆಂಟಿನಲ್ಲಿ ವ್ಯವಹಾರ ಆಗುವಾಗ Infomo Global Pvt Ltd ಕಂಪನಿಯಲ್ಲಿ 35 ಮಿಲಿಯನ್ ಶೇರ್ ಇರುತ್ತದೆ. ಎಂಬುವುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಿರುತ್ತಾರೆ. ಈ ಅಗ್ರಿಮೆಂಟ್‌ಗೆ ದಿಲೀಪ್ ಆರ್ ಅಡಿಗರು ಹಾಗೂ ಸಿಂಗಾಪುರ ಕಂಪನಿಯ ಸಿ.ಇ.ಓ ಆದ ಆನಂದ ರಾವ್ ಅವರು ಸಹಿ ಮಾಡಿರುತ್ತಾರೆ.
ಅಗ್ರಿಮೆಂಟ್ ಆದ ಬಳಿಕ ಸಿಂಗಾಪುರ ಕಂಪನಿಯವರು ಹೇಳಿದಂತೆ ದಿಲೀಪ್ ಆರ್ ಅಡಿಗರು ಪ್ರೋಡಕ್ಟ್‌ನ್ನು ಅವರಿಗೆ ಕಳುಹಿಸಿದ್ದು ಬಳಿಕ ಕಂಪನಿಯವರು ಹಾಗೂ ದಿಲೀಪ್ ಆರ್ ಅಡಿಗರು ಅವರಿಗಾಗಿ ಕೆಲಸ ಮಾಡಲು ಪ್ರಾರಂಬಿಸಿದ್ದು ದಿನಾಂಕ:6/04/2023 ರಂದು ಅಗ್ರಿಮೆಂಟ್ ಪ್ರಕಾರ ಮಾಡಿಕೊಂಡ ಒಪ್ಪಂದವು 3ವರ್ಷಕ್ಕೆ ಮುಗಿದಿದ್ದು. ಅದರ ಪ್ರಕಾರ ವ್ಯಾಲ್ಯೂಷನ್ ವರದಿಯನ್ನು ನೀಡುವಂತೆ ಇ-ಮೇಲ್ ಮುಖಾಂತರ ಕೋರಿಕೊಂಡಿದ್ದರು ಸಿಂಗಾಪುರ ಕಂಪನಿಯ ಸಿ.ಇ.ಓರವರಾದ ಆನಂದ ರಾವ್ ಅವರು ಕಂಪನಿಯ ಶೇರ್ ಪಾಲುದಾರರಾದ ಶ್ಯಾಮ್‌ದೀಪ್‌ಎಂಬವರಿಗೆ ದಿನಾಂಕ;06/10/2024 ರಂದು ಇ-ಮೇಲ್ ಮುಖಾಂತರ ಒಂದು ಮಾಹಿತಿಯನ್ನು ಕಳುಹಿಸಿದ್ದು ಈ ಮಾಹಿತಿಯಲ್ಲಿ ನಾವು ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಧೃಡಪಡಿಸಿರುತ್ತಾರೆ.
ಅಲ್ಲದೇ ಪೋನ್ ಮುಖಾಂತರ ಶ್ಯಾಮ್‌ದೀಪರವರಿಗೆ ವೀರಪ್ಪನ್ ಸುಬ್ರಹ್ಮಣ್ಯರವರಿಂದ ಆನಂದ್‌ರಾವ್‌ರವರಿಗೆ ಪೋನ್ ಮಾಡಿಸಿ 6.9 ಕೋಟಿ ನಗದು ಮತ್ತು 20ಲಕ್ಷ ಶೇರ್ Infomo ದನ್ನು ನೀಡುವುದಾಗಿ ತಿಳಿಸಿರುತ್ತಾರೆ. ಸಿಂಗಾಪುರ ಕಂಪನಿಯ ಸಿ.ಇ.ಓ ಆನಂದರಾವ್, ಕಂಪನಿಯ ಚೇರ್ಮೆನ್ ಆದ ಪೀಟರ್ ಜಪ್ರೀ ಜರ್ಮೈನ್ ಹಾಗೂ ಸಿ.ಟಿ.ಓ ಆದ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು ಮತ್ತು ಕಂಪನಿ ಬೋರ್ಡ್ ಸದಸ್ಯರಾದ ಅಸುತೋಷ್ ಶ್ರಿವತ್ಸವ ಇವರುಗಳು ಸೇರಿಕೊಂಡು ಉದ್ದೇಶ ಪೂರ್ವಕವಾಗಿ ದಿಲೀಪ್ ಆರ್ ಅಡಿಗರಿಗೆ ಕಂಪನಿಯಲ್ಲಿ ವ್ಯವಹಾರ ಮಾಡುವಂತೆ ನಂಬಿಸಿ ಕಂಪನಿಯಿಂದ ದಿಲೀಪ್ ಆರ್ ಅಡಿಗರಿಗೆ ಬರಬೇಕಾದ 33 ಕೋಟಿ ರೂಪಾಯಿ ಹಣವನ್ನು ನೀಡದೇ ನಂಬಿಸಿ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 409, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
