images-2.jpeg
Spread the love

ಕೋಟ: ದಿನಾಂಕ:13-04-2026(ಹಾಯ್ ಉಡುಪಿ ನ್ಯೂಸ್) ಗಣಿ ಇಲಾಖೆಯಿಂದ ಅನುಮತಿ ಪಡೆದು ಕಾರ್ಖಾನೆ ಗಳಿಗೆ ಮಣ್ಣು ಸರಬರಾಜು ಮಾಡುತ್ತಿದ್ದ ವ್ಯಕ್ತಿ ಯೋರ್ವರನ್ನು ತಮ್ಮನ್ನು ಪರ್ತಕರ್ತ ರೆಂದು ಹೇಳಿ ಕೊಂಡ ವ್ಯಕ್ತಿ ಗಳು ಮಾನಹಾನಿಕರ ವರದಿ ಪ್ರಕಟಿಸುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಅಜಿತ್ ಕುಮಾರ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ತಾಲೂಕು ವಡ್ಡರ್ಸೆ ,ಬನ್ನಾಡಿ ಗ್ರಾಮದ ನಿವಾಸಿ ಅಜಿತ್ ಕುಮಾರ್ ಶೆಟ್ಟಿ (32)  ಎಂಬವರು ತಮ್ಮ ಪಟ್ಟಾ ಜಾಗದ 78 ಸೆಂಟ್ಸ್  ಜಾಗದಲ್ಲಿ ಗಣಿ ಇಲಾಖೆಯಿಂದ ಪರವಾನಿಗೆ ಪಡೆದು ಸಂಬಂಧಪಟ್ಟ ಎಲ್ಲಾ ಇಲಾಖೆಗಳ NOC ಗಳನ್ನು ಪಡೆದು ಟಿಪ್ಪರ್ ಮೂಲಕ ಕುಂದಾಪುರ ಭಾಗದ ಹಂಚಿನ ಕಾರ್ಖಾನೆಗಳಿಗೆ ಮಣ್ಣು ಸರಬರಾಜು ಮಾಡುತ್ತಿರುವುದಾಗಿದೆ.

  ರಮೇಶ್ ತೆಂಕನಿಡಿಯೂರು ಎಂದು ಹೇಳಿಕೊಂಡ 1 ನೇ ಆರೋಪಿಯು ದಿನಾಂಕ 10/04/2026 ರಂದು ಬೆಳಿಗ್ಗೆ  ಉಡುಪಿ ತಹಶೀಲ್ದಾರ್ ಕಚೇರಿಗೆ ಹಾಜರಾಗುವಂತೆ ತಿಳಿಸಿ ಅಲ್ಲಿ ವಿವಿಧ ಅಧಿಕಾರಿಗಳಿಗೆ ಹಣ ನೀಡಬೇಕು ಎಂದು ಹೇಳಿ 2,25,000/-ಹಣ ನೀಡುವಂತೆ ಒತ್ತಾಯ ಮಾಡಿ 1 ತಿಂಗಳು ವ್ಯವಹಾರ ಮಾಡಲು ಅವಕಾಶ ಕೊಡುತ್ತೇವೆ ಎಂದು ಹೇಳಿರುತ್ತಾರೆ .

ಇದಾದ ಒಂದು ಗಂಟೆಯೊಳಗೆ 2 ನೇ ಆರೋಪಿ News Next ಎಂಬ ವೆಬ್ ಚಾನೆಲ್ ನಲ್ಲಿ ಅಕ್ರಮ ಕೊಜೆ ಮಣ್ಣು ಎಂದು ಸುದ್ದಿ ಪ್ರಸಾರ ಮಾಡಿರುತ್ತಾರೆ ಹಾಗೂ ಅಜಿತ್ ಕುಮಾರ್ ಶೆಟ್ಟಿ ರವರು ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯ ತನ್ನ ಮನೆಗೆ  ಹೋಗುವ ವೇಳೆ ಬನ್ನಾಡಿ ಗರಡಿ ರಸ್ತೆಯಲ್ಲಿ 3ನೇ ಆರೋಪಿ ಅಶೋಕ್ ಶೆಟ್ಟಿ ಬನ್ನಾಡಿ, ಮತ್ತು 4ನೇ ಆರೋಪಿ ವಿಜಯ ಶೆಟ್ಟಿ ಕೊತ್ತಾಡಿ ಎಂಬ ಆರೋಪಿತರು ಕಾರನ್ನು ಅಡ್ಡಗಟ್ಟಿ ನ್ಯೂಸ್ ನಲ್ಲಿ ಮತ್ತು ಬ್ರಹ್ಮ ಬೈದರ್ಕಳ ಕಂಬಳ ವಾಟ್ಸ್ ಅಫ್ ಗ್ರೂಪ್ ನಲ್ಲಿ  ನಿನ್ನ ಬಗ್ಗೆ ಹಾಕಿಸಿದ್ದೇನೆ  ಈ ವಿಷಯವನ್ನು ತೀರಿಸಲು 2,00,000/- ಹಣ ನೀಡಬೇಕೆಂದು ಬೆದರಿಕೆ ಹಾಕಿರುತ್ತಾರೆ. ಹಾಗೂ 3 ನೇ ಆರೋಪಿ ಅಶೋಕ್ ಶೆಟ್ಟಿ ಬನ್ನಾಡಿಯು ಸಾರ್ವಜನಿಕರ ನಕಲಿ  ಸಹಿಗಳನ್ನು ಬಳಸಿ  ತಪ್ಪು ಅರ್ಜಿಗಳನ್ನು ನೀಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 126(2), 308(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ. 

error: No Copying!