images-2.jpeg
Spread the love

ಕೋಟ: ದಿನಾಂಕ 03/04/2026 (ಹಾಯ್ ಉಡುಪಿ ನ್ಯೂಸ್) ಬೇಳೂರು ಗ್ರಾಮದ ಗುಳ್ಳಾಡಿ ಎಂಬಲ್ಲಿಂದ ಅಕ್ರಮವಾಗಿ ಜೇಡಿ ಮಣ್ಣು ಕಳ್ಳತನ ನಡೆಸಿ ಸಾಗಾಟ ಮಾಡುತ್ತಿದ್ದ ಇಬ್ಬರು ಟಿಪ್ಪರ್ ಚಾಲಕರನ್ನು ಬಂಧಿಸಿ ಮತ್ತು ಟಿಪ್ಪರ್ ಗಳನ್ನು ಕೋಟ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ತಾಲೂಕು ಬೇಳೂರು ಗ್ರಾಮದ ಗುಳ್ಳಾಡಿ ಎಂಬಲ್ಲಿಯ ರಾಜೀವ ಎಂಬುವವರ ಜಾಗದಲ್ಲಿ ಆರೋಪಿತರಾದ 1.KA-19-D-4448 ನೇ ಟಿಪ್ಪರ್ ವಾಹನ ಚಾಲಕ ರಮೇಶ್,2. KA-20-B-3663 ನೇ ಟಿಪ್ಪರ್ ವಾಹನ ಚಾಲಕ ಮಲ್ಲಿಕಾರ್ಜುನ ಇವರು ಸರ್ಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಜೇಡಿಮಣ್ಣನ್ನು ಕಳ್ಳತನ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿದ್ದ KA-19-D-4448 ನೇ ಟಿಪ್ಪರ್ ನ್ನು ಹಾಗೂ 3 ಟನ್ ಜೇಡಿ ಮಣ್ಣು ಹಾಗೂ KA-20-B-3663 ನೇ ಟಿಪ್ಪರ್ ಹಾಗೂ 3 ಟನ್ ಜೇಡಿ ಮಣ್ಣು ಹಾಗೂ ಹಿಟಾಚಿ ವಾಹನವನ್ನು ದಿನಾಂಕ:02-04-2026 ರಂದು ಕೋಟ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2026 ಕಲಂ: 303(2), R/w 3(5) BNS 4,4(1A) , 21 MMRD ACT ರಂತೆ ಪ್ರಕರಣ ದಾಖಲಾಗಿದೆ.

error: No Copying!