ಕೋಟ: ದಿನಾಂಕ 03/04/2026 (ಹಾಯ್ ಉಡುಪಿ ನ್ಯೂಸ್) ಮಣೂರು ಗ್ರಾಮದ ಬಾಳೆ ಬೆಟ್ಟು ಬಸ್ ನಿಲ್ದಾಣದ ಬಳಿ ನಿಂತು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಅವರಿಗೆ ದಿನಾಂಕ :02-04-2026 ರಂದು ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಬಾಳೆಬೆಟ್ಟು ಬಸ್ಸು ನಿಲ್ದಾಣದ ಬಳಿ ಸಮೀಪದಲ್ಲಿ 1)ಸಂದೀಪ ಗಾಣಿಗ ನೂಜಿ, 2)ಆದಿತ್ಯ ಶೆಟ್ಟಿ (28), ಬೇಳೂರು ಗ್ರಾಮ ಎಂಬವರು ಜೊತೆಯಾಗಿ ಸೇರಿಕೊಂಡು ಕೊಲ್ಕತ್ತದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ KKR ಮತ್ತು SRH ತಂಡಗಳ ನಡುವೆ ನಡೆಯುವ IPL T20ಕ್ರಿಕೆಟ್ ಮ್ಯಾಚ್ ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣಸಂಗ್ರಹ ಮಾಡುತ್ತ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರೆತ ಮೇರೆಗೆ ಕೂಡಲೇ ಸಿಬ್ಬಂದಿಯವರೊಂದಿಗೆ ಹೊರಟು ಬಾಳೆಬೆಟ್ಟು ಬಸ್ಸು ನಿಲ್ದಾಣದ ಸಮೀಪ ತಲುಪಿ ಸ್ವಲ್ಪ ದೂರದಲ್ಲಿ ಪೊಲೀಸರು ಮರೆಯಲ್ಲಿ ನಿಂತು ನೋಡಿದಾಗ ಬಸ್ಸು ನಿಲ್ದಾಣದ ಎದುರು ಓರ್ವ ವ್ಯಕ್ತಿ ನಿಂತುಕೊಂಡು ಕೈಯಲ್ಲಿ ಮೊಬೈಲ್ ಪೋನೊಂದನ್ನು ಹಿಡಿದುಕೊಂಡು ಅದನ್ನು ನೋಡುತ್ತಾ ಯಾರೊಂದಿಗೋ ಮಾತನಾಡುತ್ತಾ ಇದ್ದು ಆತನ ಬಳಿ ಪೊಲೀಸರು ಹೋಗಿ ಹಿಂದಿನಿಂದ ನಿಂತು ಗಮನಿಸುತ್ತಿದ್ದಾಗ ಸಮವಸ್ತ್ರದಲ್ಲಿದ್ದವರನ್ನು ಸರಿಯಾಗಿ ಗುರುತಿಸದೇ ಕೈಯಲ್ಲಿದ್ದ ಮೊಬೈಲ್ ಪೋನ್ ನ್ನು ನೋಡುತ್ತಾ ಮಧ್ಯೆ ಮಧ್ಯೆ KKR ಮತ್ತು SRH ಎಂದು ಹೇಳಿ ಹಣವನ್ನು ಕೇಳುತ್ತಾ ಬಾಜಿ ಕಟ್ಟುತ್ತಿರುವುದು ಕಂಡು ಬಂದಿದೆ .
ಆತನು ಅಕ್ರಮವಾಗಿ ಕ್ರಿಕೆಟ್ಟ ಬೆಟ್ಟಿಂಗ್ ನಡೆಸುತ್ತಿರುವುದು ಕಂಡು ಬಂದಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿರುವ ಆದಿತ್ಯ ಶೆಟ್ಟಿ ಎಂಬವನಾಗಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 78 KP ACT ಮತ್ತು ಕಲಂ:112 BNS & 66(D) IT ACT ರಂತೆ ಪ್ರಕರಣ ದಾಖಲಾಗಿದೆ.
