images-18.jpeg
Spread the love

ಕಾರ್ಕಳ: ದಿನಾಂಕ 02/04/2026 (ಹಾಯ್ ಉಡುಪಿ ನ್ಯೂಸ್)ಹಿರ್ಗಾನ ಗ್ರಾಮದ ತುಂಬೆ ಹಿತ್ಲು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಎಸ್ ಆರ್ ಅವರು ಬಂಧಿಸಿದ್ದಾರೆ.

ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಎಸ್ ಆರ್ ಅವರಿಗೆ ದಿನಾಂಕ:01-04-2026 ರಂದು ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ತುಂಬೆ ಹಿತ್ಲು ಗೋಕುಲ್ ಕಂಪೌಂಡ್ ಬಳಿಯ ಗಣೇಶ ಕಾಂಪ್ಲೆಕ್ಸ್ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ತೆರಳಿದ್ದಾರೆ.

ಪೋಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ 1) ಸುಧೀಂದ್ರ ಪೂಜಾರಿ (47),ಕ್ರಿಯೆಟಿವ್‌ ಕಾಲೇಜ್‌ ಬಳಿ ಹಿರ್ಗಾನ ಗ್ರಾಮ, ಕಾರ್ಕಳ, 2)ಮಹಮ್ಮದ್‌ ರಫೀಕ್‌ (37), ದುರ್ಗಾ ಹೈಸ್ಕೂಲ್‌ ಬಳಿ, ಕುಕ್ಕುಂದೂರು ಗ್ರಾಮ, ಕಾರ್ಕಳ ಇವರು ಈರ್ವರು ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ತುಂಬೆಹಿತ್ಲು ಗೋಕುಲ್‌ ಕಂಪೌಂಡ್ ಬಳಿ ಗಣೇಶ ಕಾಂಪ್ಲೇಕ್ಸ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಮಟ್ಜಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದರು.

ಪೊಲೀಸರು ದಾಳಿ ನಡೆಸಿ ಆರೋಪಿತರುಗಳನ್ನು ಬಂಧಿಸಿ ಆರೋಪಿಗಳು ಈರ್ವರು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಹಣ ಒಟ್ಟು 2,180/-ರೂಪಾಯಿ, ಮಟ್ಕಾ ಸಂಖ್ಯೆ ಬರೆದ ಚೀಟಿ, ಪೆನ್ನು ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 78(1), (iii) ಕರ್ನಾಟಕ ಪೊಲೀಸ್ ಕಾಯ್ದೆ  ಹಾಗೂ ಕಲಂ: 112(1) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!