ಮಲ್ಪೆ: ದಿನಾಂಕ:29-03-2026 (ಹಾಯ್ ಉಡುಪಿ ನ್ಯೂಸ್) ಅಪಘಾತ ಗೊಂಡ ಕಾರೊಂದರಲ್ಲಿ ಮಾದಕವಸ್ತು ಗಾಂಜಾ ಪತ್ತೆ ಯಾಗಿದ್ದು ಕಾರಿನಲ್ಲಿದ್ದ ಇಬ್ಬರು ಆರೋಪಿಗಳ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್ ಕುಮಾರ್.ಡಿ.ಅವರು ಗಾಂಜಾ ಸಾಗಾಟ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್ ಕುಮಾರ್.ಡಿ ಅವರು ದಿನಾಂಕ: 28/03/2026ರಂದು ಠಾಣೆಯಲ್ಲಿ ದಾಖಲಾದ ಅ.ಕ್ರ 37/2026 ಕಲಂ.281 BNS ಪ್ರಕರಣದಲ್ಲಿ ಸ್ಥಳ ಮಹಜರಿನ ಪ್ರಕ್ರಿಯೆ ನಡೆಸುವಾಗ ಹೂಡೆ ಕೋಡಿ ಬೇಂಗ್ರೆ ರಸ್ತೆಯಲ್ಲಿರುವ ಶ್ರೀ ನಾಗಬ್ರಹ್ಮ ಬೊಬ್ಬರ್ಯ ದೈವಸ್ಥಾನದ ಬಳಿ ಅಪಘಾತದಲ್ಲಿ ಒಳಗೊಂಡ KA20MB7666 ನೇ ಹುಂಡೈ ಕ್ರೆಟ್ಟಾ ಕಾರಿನ ಒಳಗೆ ಮಾದಕ ವಸ್ತು ಗಾಂಜಾ ಇರುವುದು ಕಂಡು ಬಂದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಿಳಿ ಬಣ್ಣದ ಹುಂಡೈ ಕ್ರೆಟ್ಟಾ ಕಾರು ನಂಬ್ರ: KA20MB7666 ಆಗಿದ್ದು, ಕಾರಿನಲ್ಲಿ ಗಾಂಜಾ ದಂತೆ ಇರುವ ಸ್ವತ್ತು ಒಟ್ಟು ತೂಕ 173.42 ಗ್ರಾಮ್ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 8000/- ಆಗಬಹುದು, ಕಾರಿನಲ್ಲಿ ದೊರೆತ ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್ ಅಂದಾಜು ಮೌಲ್ಯ ರೂಪಾಯಿ 6,000/-, ಮತ್ತು ನೀಲಿ ಬಣ್ಣದ ಹೋನರ್ ಮೊಬೈಲ್ ಅಂದಾಜು ಮೌಲ್ಯ ರೂಪಾಯಿ 5,000/- ರೂ ಆಗಬಹುದಾಗಿದ್ದು ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಆರೋಪಿ ಮೊಹಮ್ಮದ್ ಫೈಜಲ್ ಮತ್ತು ಇನ್ನೊರ್ವ ಆರೋಪಿಯು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಕಾಯುತ್ತಿದ್ದರು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 8(a)(c),20(b)(ii)a&b NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
