ಹಿರಿಯಡ್ಕ: ದಿನಾಂಕ:27-03-2026 (ಹಾಯ್ ಉಡುಪಿ ನ್ಯೂಸ್) ಪೆರ್ಡೂರು ಪೇಟೆಯಿಂದ ಕುಕ್ಕೆಹಳ್ಳಿ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನಿತ್ ಕುಮಾರ್ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನಿತ್ ಕುಮಾರ್ ಅವರು ದಿನಾಂಕ 26/03/2026 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪೆರ್ಡೂರು ಗ್ರಾಮದ ಕುಕ್ಕೆಹಳ್ಳಿ ರಸ್ತೆಯಲ್ಲಿರುವ ದಿನೇಶ ಎಂಬವರ ದಿನಸೀ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ದೊರೆತ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿದ್ದಾರೆ .
ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದಾಗ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ದಿನೇಶ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ತಾನು ಸಂಗ್ರಹಿಸಿದ ಹಣವನ್ನು ರಾಘವೇಂದ್ರ ಯಾನೆ ರಾಘಣ್ಣ ಎಂಬವ ತೆಗೆದುಕೊಂಡು ಹೋಗುತ್ತಾನೆ ಎಂಬುದಾಗಿ ತಿಳಿಸಿರುತ್ತಾನೆ .ಆಪಾದಿತನಿಂದ ನಗದು ಹಣ 1,010/- ರೂಪಾಯಿ, ಮಟ್ಕಾ ನಂಬ್ರ ಬರೆದ ನೋಟು ಬುಕ್ -1, ಹಾಗೂ ಬಾಲ್ ಪೆನ್ನು -1ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 78 (I)(III) KP ACT & 112 BNS ರಂತೆ ಪ್ರಕರಣ ದಾಖಲಾಗಿದೆ.
