images-2.jpeg
Spread the love

ಕೋಟ: ದಿನಾಂಕ 26/03/2026 (ಹಾಯ್ ಉಡುಪಿ ನ್ಯೂಸ್) ಬಿಲ್ಲಾಡಿ ಗ್ರಾಮದ ಅರ್ಭಕ ದಾರಕೇಶ್ವರ ದೇವಸ್ಥಾನದ ಎದುರು ಗಲಾಟೆ ಮಾಡುತ್ತಿದ್ದ ಎಂಟು ಜನರನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್ ಆವರು ಬ್ರಹ್ಮಾವರ ತಾಲ್ಲೂಕು ಬಿಲ್ಲಾಡಿ ಗ್ರಾಮದ ಅರ್ಭಕದಾರಕೇಶ್ವರ ದೇವಸ್ಥಾನದ ಜಾತ್ರಾ ಬಂದೋಬಸ್ತು ಕರ್ತವ್ಯದಲ್ಲಿದ್ದಾಗ ದಿನಾಂಕ: 25-03-2026 ರಂದು ದೇವಸ್ಥಾನದ ಎದುರು ಗಲಾಟೆ ನಡೆಯುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಠಾಣಾ ಸಿಬ್ಬಂದಿಯವರೊಂದಿಗೆ ಅರ್ಭಕದಾರಕೇಶ್ವರ ದೇವಸ್ಥಾನದ ಎದುರು ತೆರಳಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪಿದಾಗ ದೇವಸ್ಥಾನದ ಎದುರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಸುಮಾರು 8 ರಿಂದ 10 ಜನರು ಪರಸ್ಪರ ಮೈ ಕೈ ಮೇಲಾಯಿಸಿ ಗಲಾಟೆ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದು, ಸಿಬ್ಬಂದಿಗಳ ಸಹಾಯದಿಂದ ಗಲಾಟೆ ಮಾಡುತ್ತಿದ್ದ ಕೆಲವರನ್ನು ಹಿಡಿದು ಬಂಧಿಸಿ ಹೆಸರು ವಿಳಾಸ ವಿಚಾರಿಸಿದಾಗ 1) ಗಣೇಶ ಶೆಟ್ಟಿ , 2) ಭಾಸ್ಕರ ಹೆಗ್ಡೆ , 3) ಚಂದ್ರ ಶೆಟ್ಟಿ, 4) ಅಶೋಕ ಶೆಟ್ಟಿ, 5) ಶಂಕರ ಶೆಟ್ಟಿ , 6) ಅಭಿಷೇಕ್ , 7) ಚಂದ್ರ ಮಾಸ್ಟರ್ ಮತ್ತು 8) ಸಂದೇಶ ಎಂಬುದಾಗಿ ತಿಳಿಸಿರುತ್ತಾರೆ.

ಸಾರ್ವಜನಿಕ ಸ್ಥಳದಲ್ಲಿ ಮೈ,ಕೈ ಮಿಲಾಯಿಸಿ ಗಲಾಟೆ ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಆರೋಪಿತರ ವಿರುದ್ದ ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಅಪರಾಧ ಕ್ರಮಾಂಕ 49/2026 ಕಲಂ: 194(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!