IMG-20260326-WA0060.jpg
Spread the love


ಮಂಗಳೂರು: ದಿನಾಂಕ :26-03-2026(ಹಾಯ್ ಉಡುಪಿ ನ್ಯೂಸ್) ನಗರದ ನರ್ಸಿಂಗ್ ಕಾಲೇಜ್ ವೊಂದರ ವಿದ್ಯಾರ್ಥಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೇರಳದ ಅಜಿಲ್ ನಾಜಿ, ಸಾಜಿಲ್ ಅಬ್ದುಲ್ ಸಮದ್, ಅಬು ಥಾಮಸ್ ಹಾಗೂ ಮೆಲ್ಮನ್ ಟೆಲಿಸ್, ಅಶ್ವಿನ್ ಸಾಜಿ ವಿರುದ್ಧ ‌ಕೇಸ್ ದಾಖಲಾಗಿದೆ.

ಮಂಗಳೂರು ನಗರದ ಉರ್ವ ಪೊಲೀಸ್ ಠಾಣೆಯ  ವ್ಯಾಪ್ತಿಯಲ್ಲಿ ದಿನಾಂಕ 23.03 2026 ರಂದು ಐದು ಮಂದಿ ಯುವಕರು ಚಿಲಿಂಬಿ ಮಲರಾಯ ದೈವಸ್ಥಾನದ ಸಮೀಪವಿರುವ ಸ್ಟ್ರಿಂಗ್ ಫೀಲ್ಡ್ ಲೇಔಟ್ ಪ್ರದೇಶದಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಇವರನ್ನು ಪೊಲೀಸರು ವಿಚಾರಿಸಿದಾಗ ಇವರು ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದು, ಐದು ಮಂದಿ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ನಗರದಲ್ಲಿ ಪ್ರತ್ಯೇಕವಾಗಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸ್ತವ್ಯವಿರುವುದು ತಿಳಿದುಬಂದಿದೆ. ಐವರನ್ನು ಬಂಧಿಸಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಯುವಕರು ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಈ ಯುವಕರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

error: No Copying!