ಶಂಕರನಾರಾಯಣ: ದಿನಾಂಕ : 24-03-2026 (ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ನ ಸುಧಾಕರ ಶೆಟ್ಟಿ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಕುಂದಾಪುರ ಗ್ರಾಮಾಂತರ ಸಿಪಿಐ ಸಂತೋಷ್. ಎ ಕಾಯ್ಕಿಣಿ ಅವರು ದಾಳಿ ನಡೆಸಿ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ವೃತ್ತ ಸಿಪಿಐ ಸಂತೋಷ ಎ ಕಾಯ್ಕಿಣಿ ಅವರಿಗೆ ದಿನಾಂಕ 23.03.2026 ರಂದು ಸಂಜೆ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿರವರು ಕರೆ ಮಾಡಿ ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿನ ಸುಧಾಕರ ಶೆಟ್ಟಿ ಎಂಬವರ ಮನೆಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಸಿಪಿಐ ಸಂತೋಷ ಎಂ ಕಾಯ್ಕಿಣಿ ಅವರು ಕೂಡಲೇ ಈ ಮಾಹಿತಿಯನ್ನು ಶಂಕರನಾರಾಯಣ ಪೊಲೀಸ್ ಠಾಣಾ ಪಿ.ಎಸ್.ಐ ಅಕ್ಷಯ ಕುಮಾರಿ ಎಸ್.ಎನ್ ರವರಿಗೆ ತಿಳಿಸಿ ಸಿಬ್ಬಂದಿಗಳೊಂದಿಗೆ ಎಲ್ಲರೂ ಜೊತೆಯಲ್ಲಿ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ ಸುಧಾಕರ ಶೆಟ್ಟಿ ರವರ ಆರ್.ಸಿ.ಸಿ ಛಾವಣೆಯ ಮನೆಯ ಹೊರಗಿನ ಆವರಣದಲ್ಲಿ 06 ಜನ ಗಂಡಸರು ವೃತ್ತಾಕಾರದಲ್ಲಿ ಕುಳಿತುಕೊಂಡಿದ್ದು ಇಸ್ಪೀಟ್ ಎಲೆಗಳನ್ನು ಹಾಕುತ್ತಾ ಹಣವನ್ನು ಪಣವಾಗಿಟ್ಟು ಎಲೆಗಳನ್ನು ಹಾಕುತ್ತಾ ಇಸ್ಟೀಟ್ ಜುಗಾರಿ ಆಟ ಆಡುತ್ತಿರುವುದು ಕಂಡು ಬಂದಿದೆ .
ಆರೋಪಿಗಳು ಇಸ್ಪೀಟ್ ಜುಗಾರಿ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದಾಗ ಪೊಲೀಸರು ಸುತ್ತುವರಿದು ದಾಳಿ ನಡೆಸಿದಾಗ ಆಟ ಆಡುತ್ತಿದ್ದ 6 ಜನರ ಪೈಕಿ ಇಬ್ಬರು ಮನೆಯ ಕಂಪೌಂಡ್ ಆವರಣವನ್ನು ಹಾರಿಕೊಂಡು ಓಡಿ ತಪ್ಪಿಸಿಕೊಂಡಿದ್ದು ಉಳಿದ 04 ಜನರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಪೊಲೀಸರು ವಿಚಾರಣೆ ನಡೆಸಿದಾಗ, 1) ಸುಧಾಕರ ಶೆಟ್ಟಿ (52) 2) ರಮೇಶ್ (46) 3)ಮನೋಹರ (46) 4) ಮಹೇಶ್ (43) ಎಂಬುವುದಾಗಿ ತಿಳಿಸಿದ್ದು ಅವರುಗಳು ತಾವು ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು , ಓಡಿ ಹೋದ ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಒಬ್ಬಾತನು ಹರ್ಷ, ಮತ್ತೊಬ್ಬನು ಕೃಷ್ಣ ಪೂಜಾರಿ ಎಂಬುದಾಗಿ ತಿಳಿಸಿದ್ದಾರೆ.
ಪೊಲೀಸರು ಸೆರೆ ಹಿಡಿದ ಆಪಾದಿತರು ಧರಿಸಿದ ಬಟ್ಟೆಯನ್ನು ಚೆಕ್ ಮಾಡಿದಾಗ ಸುಧಾಕರ ಶೆಟ್ಟಿಯ ಬಳಿಯಲ್ಲಿ ಒಟ್ಟು 2300/- ರೂಪಾಯಿ, ಮನೋಹರನ ಬಳಿಯಲ್ಲಿ ಒಟ್ಟು 1400/- ರೂಪಾಯಿ, ಮಹೇಶನ ಬಳಿಯಲ್ಲಿ ಒಟ್ಟು 2100/- ರೂಪಾಯಿ ಸಿಕ್ಕಿದ್ದು ಈ ಹಣವನ್ನು ಅಂದರ್ – ಬಾಹರ್ ಇಸ್ಪೀಟ್ ಆಟ ಆಡಲು ತಂದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ .
ಆರೋಪಿಗಳನ್ನು ಬಂಧಿಸಿ ಸ್ಥಳದಲ್ಲಿ ಇದ್ದ 1) ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದವರ ಬಳಿಯಿದ್ದ ಹಾಗೂ ನೆಲಕ್ಕೆ ಹಾಸಿದ್ದ ಬೆಡ್‌ಶೀಟ್ ಮೇಲೆ ಇದ್ದ ಒಟ್ಟು 6,700/- ರೂಪಾಯಿ, 2) ಕೆಂಪು ಮತ್ತು ಕಪ್ಪು ಬಣ್ಣದ ಬೆಡ್‌ಶೀಟ್-1, 3) 52 ಇಸ್ಪೀಟ್ ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ 87 ಕೆ ಪಿ ಕಾಯ್ದೆ ರಂತೆ ಪ್ರಕರಣ ದಾಖಲಾಗಿದೆ.
