ದಿನಾಂಕ:23-03-2026 (ಹಾಯ್ ಉಡುಪಿ ನ್ಯೂಸ್)
ಮಂಗಳೂರು:ಗಾಂಜಾ ಮಾರಾಟ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ (NDPS ಕಾಯ್ದೆ 8(c) ಮತ್ತು 20(b)) ಹಾಗೂ LPC No: 11/2024 ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯಾಗಿದ್ದ ನಸೀಮ್ ಎಂಬಾತನು ಹಲವು ವರ್ಷಗಳಿಂದ ಅಡಗಿಕೊಂಡಿದ್ದನು.
ಸುಳ್ಯ ಠಾಣೆಯ ಸಿಬ್ಬಂದಿಗಳಾದ ರಮೇಶ್ ಎಲ್, ರಾಜು ನಾಯ್ಕ್ ಡಿ ಮತ್ತು ವಿಖ್ಯಾತ್ ಜೆ ಗೌಡ ಅವರ ತಂಡವು 20-03-2026 ರಂದು ಉತ್ತರ ಪ್ರದೇಶದ ಖಾಜಿಪುರದಲ್ಲಿ ಅವಿತಿದ್ದ ಆರೋಪಿಯನ್ನು ಬಂಧಿಸಿ ಕರೆ ತಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
