ಕಾರ್ಕಳ: ದಿನಾಂಕ :18-03-2026 (ಹಾಯ್ ಉಡುಪಿ ನ್ಯೂಸ್) ದೇವಸ್ಥಾನದ ಜಾತ್ರೆಯಲ್ಲಿ ಭಾಗವಹಿಸಿದ್ದ ಡಾ.ವಿಶ್ವಿತ್ ಶೆಟ್ಟಿ ಎಂಬವರಿಗೆ ಸೋಮನಾಥ ಪೂಜಾರಿ ಎಂಬವನು ಹಲ್ಲೆ ನಡೆಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂಡ್ಕೂರು ಗ್ರಾಮದ, ಸಂಕಲಕರಿಯ,ಕಂಡಿಗ ನಿವಾಸಿ ಡಾ.ವಿಶ್ವಿತ್ ಶೆಟ್ಟಿ (35) ಎಂಬವರು ದಿನಾಂಕ: 17/03/2026 ರಂದು ಮುಂಡ್ಕೂರು ಗ್ರಾಮದ ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಇದ್ದಾಗ ರಾತ್ರಿ ಅಪಾದಿತ ಸೋಮನಾಥ ಪೂಜಾರಿ ಎಂಬವನು ವಿಶ್ವಿತ್ ಶೆಟ್ಟಿ ಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಆತನ ಮೊಬೈಲ್‌ನಿಂದ ವಿಶ್ವಿತ್ ಶೆಟ್ಟಿ ರವರ ಎದೆಗೆ ಬಡಿದು, ನಂತರ ಕೈಯಿಂದ ಹಲ್ಲೆ ಮಾಡಿ ವಿಶ್ವಿತ್ ಶೆಟ್ಟಿ ಯವರನ್ನು ಉದ್ದೇಶಿಸಿ ನೀನು ಹೊರಗೆ ಸಿಗು ಅಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ಎಂದು ವಿಶ್ವಿತ್ ಶೆಟ್ಟಿ ಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆ ನಡೆಸಲು ಕಾರಣವೇನೆಂದು ತಿಳಿದುಬಂದಿಲ್ಲ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ U/S 118(1), 115(2),352,351 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.
