images-20.jpeg
Spread the love

ಕೋಟ: ದಿನಾಂಕ:09-03-2026( ಹಾಯ್ ಉಡುಪಿ ನ್ಯೂಸ್) ಗುಳ್ಳಾಡಿ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗದು ಮತ್ತು ಚಿನ್ನಾಭರಣ ಕದ್ದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬೇಳೂರು ಗ್ರಾಮದ ಗುಳ್ಳಾಡಿ ಹೊಸಿಮನೆ ನಿವಾಸಿ ಸತೀಶ ಶೆಟ್ಟಿ (54) ಎಂಬವರು ದಿನಾಂಕ:08.03.2026 ರಂದು ರಾವುತೇಶ್ವರ ದೇವಸ್ಥಾನದ ಗೆಂಡೋತ್ಸ್ವ ಕಾರ್ಯಕ್ರಮಕ್ಕೆ ಹೆಂಡತಿ ಹಾಗೂ ಮಗಳೊಂದಿಗೆ ಮನೆಗೆ ಬೀಗ ಹಾಕಿ ರಾತ್ರಿ ದೇವಸ್ಥಾನಕ್ಕೆ ಹೋಗಿದ್ದು ಪೂಜೆ ಮುಗಿಸಿ ರಾತ್ರಿ 01.00 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ದ್ವಾರದ ಬೀಗವನ್ನು ಯಾರೋ ಕಳ್ಳರು ಕತ್ತಿಯಿಂದ ಮುರಿದು ,ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಮಲಗುವ ಕೋಣೆಯಲ್ಲಿ ಗ್ರೋದೇಜ್ ಓಪನ್ ಮಾಡಿ ಅದರಲ್ಲಿದ್ದ ನಗದು ರೂ 2,35,000/- ಮತ್ತು ಚಿನ್ನದ ಬ್ರಾಸ್ ಲೈಟ್ -1(ಅಂದಾಜು 7 ಗ್ರಾಂ), ಹಾಗೂ ಕಿವಿಯ ಬೆಂಡೋಲೆ -1 (ಅಂದಾಜು 12 ಗ್ರಾಂ) ಕಳ್ಳತನವಾಗಿರುತ್ತದೆ .ಒಟ್ಟು 5,35,000/- ಮೌಲ್ಯದ ನಗದು ಚಿನ್ನಾಭರಣ ಕಳ್ಳತನವಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 331(4),305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!