IMG-20260225-WA0061.jpg
Spread the love

ಕಾರ್ಕಳ: (ಹಾಯ್ ಉಡುಪಿ ನ್ಯೂಸ್) ಶಿರ್ಲಾಲು ಪಡಿಬೆಟ್ಟು ಗ್ರಾಮಸ್ಥರ ವತಿಯಿಂದ ಶಿರ್ಲಾಲು ಪಡಿಬೆಟ್ಟು ಐದು ಸೆಂಟ್ಸ್ ವಠಾರದಲ್ಲಿ ಸಾರ್ವಜನಿಕ ಶನೀಶ್ವರ ಪೂಜೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕರಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ರಾತ್ರಿ ಮಹಾಪೂಜೆಯ ನಂತರ ಶ್ರೀ ಬೆಂಕಿನಾಥೇಶ್ವರ ಕ್ರಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ,ಬಾಳ,ಕಳವಾರು ಇವರಿಂದ ಶ್ರೀ ರವಿಕುಮಾರ್ ಸುರತ್ಕಲ್ ವಿರಚಿತ “ನಾಗರ ಪಂಚಮಿ” ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು.  ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಸೇವಕರನ್ನು ಗೌರವಿಸಲಾಯಿತು.

error: No Copying!