istockphoto-1217872772-612x612.jpg
Spread the love

ಬೈಂದೂರು: ದಿನಾಂಕ:09-03-2026(ಹಾಯ್ ಉಡುಪಿ ನ್ಯೂಸ್) ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿ ಯನ್ನು ಅಕ್ರಮವಾಗಿ ವಾಹನವೊಂದರಲ್ಲಿ ಸಂಗ್ರಹಿಸಿ ಇಟ್ಟಿದ್ದ ಇಬ್ಬರು ಅಪರಾಧಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ವಲಯ ಆಹಾರ ನಿರೀಕ್ಷಕರಾದ ವಿನಯಕುಮಾರ್ ಅವರಿಗೆ ದಿನಾಂಕ:07-03-2026 ರಂದು ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಆರೋಪಿಗಳಾದ ಅಬ್ದುಲ್‌ ಮಜೀದ ಮತ್ತು ಐಶಾ ವಾಸೀಂ ಎಂಬವರು KA-15-8917 ಮೂರು ಚಕ್ರದ ಗೂಡ್ಸ್‌ ಗಾಡಿಯಲ್ಲಿ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ದಿನಾಂಕ 07/03/2026 ರಂದು ಬೆಳಿಗ್ಗೆ ದಾಳಿ ನಡೆಸಿ ಆರೋಪಿಗಳು ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇರಿಸಿಕೊಂಡಿದ್ದ ಒಟ್ಟು 400 ಕೆ ಜಿ ತೂಕದ ರೂಪಾಯಿ 9200/- ಮೌಲ್ಯದ 15 ಪಾಲಿಥಿನ್ ಚೀಲ ಅಕ್ಕಿ ತುಂಬಿರುವ ಚೀಲಗಳನ್ನು ಸ್ವಾದೀನಪಡಿಸಿಕೊಂಡು ತಲ್ಲೂರು TAMPMC ಗೋದಾಮಿಗೆ ಇರಿಸಿರುವುದಾಗಿ ಬೈಂದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿನಯ್ ಕುಮಾರ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 3, 6, 7 Essential commodities act ರಂತೆ ಪ್ರಕರಣ ದಾಖಲಾಗಿದೆ.

error: No Copying!