ಬ್ರಹ್ಮಾವರ: ದಿನಾಂಕ : 08/03/2026 (ಹಾಯ್ ಉಡುಪಿ ನ್ಯೂಸ್) ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆಯ ಹಾಡಿ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ವಿಠ್ಠಲ ಎಮ್ ಅವರು ದಾಳಿ ನಡೆಸಿ ಜುಗಾರಿ ಆಡುತ್ತಿದ್ದ 10 ಜನರನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ವಿಠ್ಠಲ್ ಎಮ್, ಅವರಿಗೆ ದಿನಾಂಕ:07-03-2026 ರಂದು ಠಾಣೆಯ ಬೀಟ್ ಸಿಬ್ಬಂದಿ ರವರು ಕರೆ ಮಾಡಿ ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ಕೇಶವ ಕಲ್ಕುರ ಎಂಬವರ ಜಾಗದ ಬಳಿ ಇರುವ ಹಾಡಿ ಪ್ರದೇಶದಲ್ಲಿ ಸುಮಾರು ಜನ ಸೇರಿಕೊಂಡು ಹಣವನ್ನು ಪಣವನ್ನಾಗಿಟ್ಟು ಗರಗರ ಮಂಡಲ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ನೀಡಿದ್ದಾರೆ.
ಅದರಂತೆ ಎಎಸ್ಐ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಹೊರಟು ಗರಗರ ಮಂಡಲ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದ ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ಕೇಶವ ಕಲ್ಕುರ ಎಂಬುವರ ಜಾಗದ ಬಳಿ ಇರುವ ಹಾಡಿ ಪ್ರದೇಶಕ್ಕೆ ದಾಳಿ ನಡೆಸಿ ಅಲ್ಲಿ ಜುಗಾರಿ ಆಡುತ್ತಿದ್ದ 1] ಹರೀಶ್, 2] ಗುರುರಾಜ್, 3] ವೆಂಕಟೇಶ್ ಪೂಜಾರಿ, 4] ಹರ್ಷ, 5] ಸುರೇಶ್ ನಾಯ್ಕ, 6] ರಾಜ ನಾಯ್ಕ, 7] ಪೀಟರ್ ಡಿಮೆಲ್ಲೋ, 8] ನಾಗೇಶ, 9] ನಾಗರಾಜ, 10] ರಾಜೇಶ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅವರುಗಳು ಗರಗರ ಮಂಡಲ ಎಂಬ ಅದೃಷ್ಟದ ಜುಗಾರಿ ಆಟಕ್ಕೆ ಬಳಸಿದ ಚಿತ್ರಗಳಿರುವ ಫ್ಲೆಕ್ಸ್ ಶೀಟ್-01, ಅರ್ಧ ಉರಿದ ಕ್ಯಾಂಡಲ್-02, ಪೂರ್ಣ ಕ್ಯಾಂಡಲ್-02, ಗರಗರ ಮಂಡಲ ಎಂಬ ಅದೃಷ್ಟದ ಜುಗಾರಿ ಆಟಕ್ಕೆ ಬಳಸುತ್ತಿದ್ದ ಪ್ಲಾಸ್ಟಿಕ್ ಡಬ್ಬಿ-01, ಗರಗರ ಮಂಡಲ ಎಂಬ ಅದೃಷ್ಟದ ಜುಗಾರಿ ಆಟಕ್ಕೆ ಬಳಸಿದ ಆರು ಮುಖದ ಡೈಸ್ ಕಾಯಿನ್-06, ಆಂಡ್ರಾಯಿಡ್ ಮೊಬೈಲ್ ಫೋನ್-08 ಪ್ರತಿ ಮೊಬೈಲಿಗೆ ರೂ. 3,000/- ದಂತೆ ಒಟ್ಟು ರೂ. 24,000/-, ಕೀಪ್ಯಾಡ್ ಮೊಬೈಲ್ ಫೋನ್-01 ಅಂದಾಜು ಮೌಲ್ಯ ರೂ. 500/-, ಚೌಕಾಕಾರದ ಮರದ ತುಂಡು-01 ಮತ್ತು KA-20-HG-9782, KA-20-HA-5468 KA-20-EX-8835 ನೇ ನಂಬ್ರದ 3 ದ್ವಿಚಕ್ರ ವಾಹನಗಳು ಅಂದಾಜು ಮೌಲ್ಯ ರೂ. 1,20,000/- ಸೇರಿದಂತೆ ಒಟ್ಟು ರೂ.1,54,100/- ಮೌಲ್ಯದ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 112 BNS ಹಾಗೂ 87 KARNATAKA POLICE ACT ರಂತೆ ಪ್ರಕರಣ ದಾಖಲಾಗಿದೆ.
