IMG_20260303_233858.jpg
Spread the love

ಮಲ್ಪೆ: ದಿನಾಂಕ:03-03-2026(ಹಾಯ್ ಉಡುಪಿ ನ್ಯೂಸ್) ಪ್ರೇಮಿಗಳ ಈರ್ವರ ಕುಟುಂಬದ ನಡುವೆ ರಾಜಿ ಪಂಚಾಯಿತಿ ನಡೆಸಲು ಬಂದಿದ್ದ ಹಿಂದೂ ಮುಖಂಡನಿಗೆ ಹೆಣ್ಣಿನ ಕಡೆಯವರು ಚೂರಿ ಹಾಕಿದ ಘಟನೆ ಮಲ್ಪೆ ಯಲ್ಲಿ ನಡೆದಿದೆ.

ಮಲ್ಪೆ ಯ ಯುವಕನೋರ್ವ ಹಾಗೂ ಪಡುಬಿದ್ರಿ ಸಮೀಪದ ಪಲಿಮಾರು ನಿವಾಸಿ ಯುವತಿ ಇವರು ಪ್ರೇಮಿಗಳೆನ್ನಲಾಗಿದ್ದು,ಈ ವಿಚಾರದಲ್ಲಿ ಕುಟುಂಬ ದವರವಲ್ಲಿ ಅಸಮಾಧಾನ ಇದ್ದು ಈ ಬಗ್ಗೆ ಇಂದು ಸಂಜೆ ಮಲ್ಪೆ ಯಲ್ಲಿ ರಾಜಿ ಪಂಚಾಯಿತಿ ನಡೆಸಲು ಬಂದಿದ್ದು ಸ್ಥಳದಲ್ಲಿದ್ದ ಸ್ಥಳೀಯ ಹಿಂದೂ ನಾಯಕ ಮಂಜುನಾಥ ಸಾಲಿಯಾನ್ ಎಂಬವನಿಗೆ ಮಾತಿನ ಭರದಲ್ಲಿ ಯುವತಿಯ ಕಡೆಯ ಯುವಕನೋರ್ವ ಹೊಟ್ಟೆ ಗೆ ಚೂರಿ ಇರಿದಿದ್ದು ಗಾಯಗೊಂಡ ಮಂಜುನಾಥ ಸಾಲಿಯಾನ್ ರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!