IMG_20260302_203139.jpg
Spread the love

ಕಾರ್ಕಳ: ದಿನಾಂಕ:02-03-2026 (ಹಾಯ್ ಉಡುಪಿ ನ್ಯೂಸ್) ಮನೆಯ ನಾಗಬನದಲ್ಲಿ ಪೂಜೆ ಮಾಡಿದ ವಿಚಾರವಾಗಿ ತಮ್ಮ ನೋರ್ವ ತನ್ನ ಅಕ್ಕನಿಗೆ ಗಂಭೀರ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸ್ವಾತಿ ಶೆಟ್ಟಿ (45) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಂತಾವರ ಗ್ರಾಮದ ಪೆರ್ಲಗುತ್ತು, ಬೇಲಾಡಿ ನಿವಾಸಿ ಸ್ವಾತಿ ಶೆಟ್ಟಿ ಎಂಬವರು ಅವಿವಾಹಿತರಾಗಿದ್ದು ತಾಯಿ ಪುಷ್ಪ ಡಿ ಶೆಟ್ಟಿ ಅವರೊಂದಿಗೆ ವಾಸವಾಗಿರುತ್ತಾರೆ. ದಿನಾಂಕ 25/02/2026 ರಂದು ಮನೆಯ ನಾಗಬನದಲ್ಲಿ ಪೂಜೆ ಇದ್ದು ಸ್ವಾತಿ ಶೆಟ್ಟಿ ಯವರು  ಪೂಜೆ ಮುಗಿಸಿ ಮನೆಯಲ್ಲಿ ಇದ್ದಾಗ ಸಂಜೆ 4 ಗಂಟೆಗೆ ಅಪಾದಿತನಾದ ಸ್ವಾತಿ ಶೆಟ್ಟಿ ಯವರ ತಮ್ಮ ಅಭಿನಂದನ್ ಅಡ್ಯಂತಾಯ ಮನೆಗೆ ಬಂದು ಪೂಜೆ ಮಾಡಿದ ನಾರಾಯಣ ಭಟ್ಟ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈಯಲು ಪ್ರಾರಂಭಿಸಿದ್ದು, ಆಗ ಸ್ವಾತಿ ಶೆಟ್ಟಿ ರವರ  ತಾಯಿ ನಾರಾಯಣ ಭಟ್ಟರು ನಮಗೆ ಪೂಜೆಗೆ ಹೇಳಿರುತ್ತಾರೆ, ಅವರಿಗೆ ಜೋರು ಮಾಡಬೇಡ ಎಂದು ಹೇಳಿದ್ದಕ್ಕೆ  ಅಭಿನಂಧನ್ ಅಡ್ಯಂತಾಯನು ಮನೆಯಲ್ಲಿ ಇದ್ದ ಒಂದು ಮಣ್ಣಿನ ಮಡಕೆಯನ್ನು ತೆಗೆದು ಒಡೆದಿರುತ್ತಾನೆ, ಮತ್ತು  ಸ್ವಾತಿ ಶೆಟ್ಟಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸ್ವಾತಿ ಶೆಟ್ಟಿ ರವರ ಜಡೆ ಹಿಡಿದು ಎಳೆದು ಮನೆಯ ಚಾವಡಿಯ ಕಂಭಕ್ಕೆ ತಲೆಯನ್ನು ಗುದ್ದಿರುತ್ತಾನೆ.

ನಂತರ ಅಂಗಳದವರೆಗೆ ಎಳೆದುಕೊಂಡು ಬಂದು ನೆಲಕ್ಕೆ ದೂಡಿ ಹಾಕಿ ಒಂದು ದೊಡ್ಡ ಮರದ ರೀಪಿನಿಂದ ಸ್ವಾತಿ ಶೆಟ್ಟಿ ರವರ ಎರಡೂಕಾಲುಗಳಿಗೆ, ಕೈಗಳಿಗೆ ಮತ್ತು ತಲೆಗೆ ಹೊಡೆದು ಗಾಯವುಂಟು ಮಾಡಿರುತ್ತಾನೆ ಮತ್ತು ಕೊಲ್ಲುವುದಾಗಿ ಕೆಂಪು ಬಣ್ಣದ ಶೂ ಲೇಸ್ ಹಿಡಿದುಕೊಂಡು ಬಂದಿರುತ್ತಾನೆ. ಮತ್ತು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಸ್ವಾತಿ ಶೆಟ್ಟಿ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  U/S 74,115(2),118(1),351 (2), 352 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!