gettyimages-2198823007-612x612.jpg
Spread the love

ಬ್ರಹ್ಮಾವರ: ದಿನಾಂಕ:28-02-2026(ಹಾಯ್ ಉಡುಪಿ ನ್ಯೂಸ್)ಸೈಬರ್ ಅಪರಾಧಿಗಳು ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಿರುವ ಬಗ್ಗೆ ಚಾಂತಾರು ನಿವಾಸಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ಚಾಂತಾರು ಗ್ರಾಮದ ನಿವಾಸಿ ಬಿ. ಅಶೋಕ (64) ಎಂಬವರ ಯೂನಿಯನ್ ಬ್ಯಾಂಕ್ ಖಾತೆಯಿಂದ ದಿನಾಂಕ 23/02/2026 ರಂದು ರಾತ್ರಿ 10:52 ಗಂಟೆಯಿಂದ ದಿನಾಂಕ 24/02/26 ರಂದು ಬೆಳಿಗ್ಗೆ 10:51 ಗಂಟೆಯ ಮಧ್ಯಾವಧಿಯಲ್ಲಿ ಅವರ ಅರಿವಿಗೆ ಬಾರದೇ ಯಾರೋ ಸೈಬರ್ ಅಪರಾಧಿಯು ಹಂತ ಹಂತವಾಗಿ ಒಟ್ಟು ರೂ 99,950/- ಹಣವನ್ನು ವರ್ಗಾವಣೆಮಾಡಿ ಬಿ.ಅಶೋಕ ಅವರಿಗೆ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ  ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!