ಉಡುಪಿ: ದಿನಾಂಕ:23-02-2026 (ಹಾಯ್ ಉಡುಪಿ ನ್ಯೂಸ್)
ನಗರದ ಜನನಿಬಿಡ ಕಲ್ಸಂಕ ಜಂಕ್ಷನ್ ನಲ್ಲಿ ಭಾನುವಾರ ಸಂಜೆ ಯುವಕನೋರ್ವ ಕೈಯಲ್ಲಿ ಬಾಟಲಿಯೊಂದರಲ್ಲಿ ಪೆಟ್ರೋಲ್ ಹಿಡಿದು ಕೊಂಡು ಬಂದು ಕಾಲಿಗೆ ಪೆಟ್ರೋಲ್ ಸುರಿದು ಕೊಂಡು ಬೆಂಕಿ ಹಚ್ಚಿ ಕೊಂಡಿದ್ದಾನೆ. ಆ ಕೂಡಲೇ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಆತನನ್ನು ರಕ್ಷಿಸಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ಯುವಕ ಮಾನಸಿಕ ರೋಗಿ ಎನ್ನಲಾಗಿದೆ.
