ಕುಂದಾಪುರ: ದಿನಾಂಕ: 22.02.2026 (ಹಾಯ್ ಉಡುಪಿ ನ್ಯೂಸ್) ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ಗರಗರ ಮಂಡಲ ಜುಗಾರಿ ಆಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನಾಸೀರ್ ಹುಸೇನ್ ಅವರಿಗೆ ದಿನಾಂಕ:21-02-2026 ರಂದು ಕುಂದಾಪುರ ತಾಲೂಕು ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಗುಡುಗುಡಿ(ಗರಗರ ಮಂಡಲ) ಆಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 1) ಹರೀಶ್ (41) ನೂಜಾಡಿ ಗ್ರಾಮ,ಕುಂದಾಪುರ ತಾಲೂಕು, 2) ಗಣೇಶ ಎನ್ (31) ಬಗ್ವಾಡಿ, ಕುಂದಾಪುರ ತಾಲೂಕು 3) ರಾಘವೇಂದ್ರ (37) ನೂಜಾಡಿ ಗ್ರಾಮ, ಕುಂದಾಪುರ ತಾಲೂಕು 4) ಪ್ರವೀಣ್ ಎಮ್ (32) ದೇವಲ್ಕುಂದ ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಕೊಂಡಿದ್ದಾರೆ.
ಗುಡುಗುಡಿ(ಗರಗರ ಮಂಡಲ)ಆಟಕ್ಕೆ ಬಳಸಿದ್ದ 1) 7,630/- ರೂಪಾಯಿ ನಗದು ಹಣ, 2) ಸೂರ್ಯ, ಚಂದ್ರ, ಡೈಮಂಡ್, ಕಳವಾರ, ಆಟಿನ್, ಇಸ್ಪೀಟ್ ಚಿತ್ರಗಳಿರುವ ಪ್ಲಾಸ್ಟಿಕ್ ಬ್ಯಾನರ್-01 3) ದಾಳ-03, 4) ಪ್ಲಾಸ್ಟಿಕ್ ಡಬ್ಬ-01, 5) ಮರದ ಹಲಗೆಯ ತುಂಡು-01 ನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.
