images-16.jpeg
Spread the love

ಕುಂದಾಪುರ: ದಿನಾಂಕ:21-02-2026(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ಲೋಕಾಯುಕ್ತರು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಯೋರ್ವ ಪ್ರಕರಣದಲ್ಲಿ ಸಾಕ್ಷಿದಾರರಾಗಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಪತ್ರಕರ್ತೆ ಯೋರ್ವರ ಹೆಸರು ಹೇಳಿ ಬೆದರಿಕೆ ಹಾಕಿ ಸಾಕ್ಷಿ ಹಿಂತೆಗೆಸಿರುವ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಜೇಂದ್ರ ನಾಯ್ಕ ಎಂ ಎನ್ (43) ಇವರಿಗೆ ದಿನಾಂಕ 22/01/2025 ರಂದು ಮಹಮ್ಮದ್ ಹನೀಪ್ ಎಂಬವರು ನೀಡಿದ ದೂರಿನ ಮೇರೆಗೆ ಠಾಣೆಯ ಅಪರಾಧ ಕ್ರಮಾಂಕ 01/2025 ಕಲಂ: 7(a) ಭ್ರಷ್ಟಾಚಾರ ಪ್ರತಿಬಂಧ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಳಿಕ ಉಡುಪಿ ಲೋಕಾಯುಕ್ತ ಪೊಲೀಸರು ಹೆಚ್ ಉಮಾಶಂಕರ್ ಪಿಡಿಓ ಗಂಗೊಳ್ಳಿ ಹಾಗೂ ಶೇಖರ್ ಜಿ ದ್ವೀತಿಯ ದರ್ಜೆ ಸಹಾಯಕ ಗಂಗೊಳ್ಳಿ ಗ್ರಾಮ ಪಂಚಾಯತ್ ಇವರನ್ನು ದಿನಾಂಕ 18/01/2025 ರಂದು ಬಂಧಿಸುವ ಸಮಯ ಪಂಚಾಯತುದಾರರಾಗಿ ಡಾ ರವಿಕುಮಾರ್ ಹುಕ್ಕೇರಿ ಕಾರ್ಯನಿರ್ವಹಣಾಧಿಕಾರಿ ಕುಂದಾಪುರ ತಾಲೂಕು ಪಂಚಾಯತ್ ಮತ್ತು ಶ್ರೀ ರಾಮಚಂದ್ರ ಮಯ್ಯ ವ್ಯವಸ್ಥಾಪಕರು ತಾಲೂಕು ಪಂಚಾಯತ್ ಕಛೇರಿ ಇವರಿಗೆ ಆಡಿಯೋ ಸಂಭಾಷಣೆಯನ್ನು ಕೇಳಿಸಿದ್ದು ಅದರ ಧ್ವನಿ ಉಮಾಶಂಕರ ಹೆಚ್ ಪಿಡಿಓ ಮತ್ತು ಶೇಖರ್ ಜಿ ರವರದ್ದೇ ಎಂದು ಗುರುತಿಸಿದ್ದು ಬಳಿಕ ಪಂಚನಾಮೆಗೆ ಸಹಿ ಮಾಡಿರುತ್ತಾರೆ.

ನಂತರ ದಿನಾಂಕ 12/03/2025 ರಂದು ಪಂಚನಾಮೆ ಗೆ ಸಹಿ ಹಾಕಿದ್ದ ಸಾಕ್ಷಿದಾರರು ಆಪಾದಿತ ಪಿಡಿಓ ಉಮಾಶಂಕರ್ ರವರು ಆರತಿ ಗಿಳಿಯಾರು ಎಂಬ ಪತ್ರಕರ್ತೆಯನ್ನು ತೋರಿಸಿ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿ ಸಾಕ್ಷಿದಾರರಿಗೆ ಹೆದರಿಸಿ ಛಾಪಾ ಕಾಗದದಲ್ಲಿ ನಾವು ಪಂಚನಾಮೆ ಕಾಲದಲ್ಲಿ ಆಪಾದಿತ ಉಮಾಶಂಕರ್ ರ ಧ್ವನಿಯನ್ನು ಗುರುತಿಸಿದ ಬಗ್ಗೆ ಹೇಳಿಕೆ ದಾಖಲಿಸಿರುವುದು ಸಮಂಜಸವಾಗಿರುವುದಿಲ್ಲ ಇದಕ್ಕೆ ನಮ್ಮ ಸಹಮತ ಇರುವುದಿಲ್ಲ ಎಂಬುವುದಾಗಿ ನೋಟರಿ ಪ್ರಮಾಣ ಪತ್ರವನ್ನು ತಯಾರಿಸಿ ಅಂಚೆ ಮೂಲಕ ರವಾನಿಸಿದ್ದಾರೆ.

ಈ ಬಗ್ಗೆ ಸರಕಾರಿ ಅಧಿಕಾರಿಯಾದ ಸಾಕ್ಷಿದಾರರ ಮೇಲೆ ಇಲಾಖಾ ವಿಚಾರಣೆ ನಡೆಯುತ್ತಿದ್ದು ಆ ಸಮಯ ಆಪಾದಿತರು ಬೆದರಿಕೆ ಹಾಕಿ ಛಾಪಾ ಕಾಗದಕ್ಕೆ ಸಹಿ ಹಾಕಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಮಾನ್ಯ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ: 232 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!