ಹಿರಿಯಡ್ಕ: ದಿನಾಂಕ:19-02-2026( ಹಾಯ್ ಉಡುಪಿ ನ್ಯೂಸ್) ಗದ್ದೆಯಲ್ಲಿ ಮೇಯುತ್ತಿದ್ದ ಕರುವನ್ನು ಇಬ್ಬರು ವ್ಯಕ್ತಿಗಳು ಆಟೋ ರಿಕ್ಷಾದಲ್ಲಿ ಕಳವು ಮಾಡಿ ಕೊಂಡೊಯ್ಯುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಪೆರ್ಡೂರು ಬಳಿ ನಡೆದಿದೆ.
ದಿನಾಂಕ 17/02/2026 ರಂದು ರಾತ್ರಿ 10:30 ಗಂಟೆಗೆ ರಾಘವೇಂದ್ರ ಮತ್ತು ಸುಧೀಂದ್ರ ಎಂಬವರು ಪೆರ್ಡೂರು ಗ್ರಾಮದ ಪೆರ್ಡೂರು ದೇವಸ್ಥಾನದ ಎದುರು ಗದ್ದೆಯ ಜಾಗದಲ್ಲಿದ್ದ ಕರುವನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿ KA-20-AA-9306 ನೇ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದ್ದಾರೆ ಪೆರ್ಡೂರು ಗ್ರಾಮದ ನಿವಾಸಿ ಸುನಿಲ್ (32)ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುನಿಲ್ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 303(2) ,62 BNS ಮತ್ತು 5,12(2) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿದೆ.
