ಕಾಪು: ದಿನಾಂಕ:18-02-2026 (ಹಾಯ್ ಉಡುಪಿ ನ್ಯೂಸ್) ಕಟಪಾಡಿ ನಿವಾಸಿ ಮಹಿಳೆಯೋರ್ವರ ನಾದಿನಿ ಹಾಗೂ ಇತರರು ನಂಬಿಸಿ ಚಿನ್ನ ಪಡೆದು ಇದೀಗ ವಂಚಿಸಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ, ಕಟಪಾಡಿ ನಿವಾಸಿ ಅವ್ವಮ್ಮ (30) ಎಂಬವರಿಗೆ ಮದುವೆ ಸಮಯದಲ್ಲಿ ಅವರ ಮನೆಯವರು 37 ಪವನ್ ಚಿನ್ನವನ್ನು ಹಾಕಿದ್ದು. ಅವ್ವಮ್ಮ ಅವರ ನಾದಿನಿ ನಸೀಮಾರವರು ವಿವಾಹ ಕಾರ್ಯಕ್ರಮಕ್ಕೆ ಹೋಗಲು ಇದೆ ಎಂದು ನಂಬಿಸಿ ಅವ್ವಮ್ಮ ರವರಲ್ಲಿದ್ದ 296 ಗ್ರಾಂ ಚಿನ್ನದಲ್ಲಿ ಮಗುವಿನ ಚಿನ್ನದ ಸರ -2, ಪೇಂಡೆಂಟ್ -1̧ ಬ್ರಾಸ್ ಲೇಟ್ -1, ಕರಿಮಣಿ ಬಳೆ -1, ಕಾಲಿನ ಗೆಜ್ಗೆ -1, ಉಂಗುರ -1. ದೊಡ್ಡ ಮಾಲೆ – 72 ಗ್ರಾಂ, 1 ಬ್ರಾಸ್ ಲೇಟ್ – 16 ಗ್ರಾಂ, 1 ಹೆಸರಿನ ರಿಂಗ್-5 ಗ್ರಾಂ , ಉಂಗುರ -5 ಗ್ರಾಂ, ನೆಕ್ಲೇಸ್ – 65 ಗ್ರಾಂ, 1 ಸೊಂಟ ಪಟ್ಟಿ -35 ಗ್ರಾಂ , ಬ್ರಾಸ್ ಲೇಟ್ –̧6 ಗ್ರಾಂ ಮುತ್ತಿನ ಹಾರ 8 ̧ಗ್ರಾಂ, ರೂಬಿ ಉಂಗುರ – 6 ಗ್ರಾಂ ಕಾಲಿನ ಗೆಜ್ಜೆ – 16 ಗ್ರಾಂ 2 ಬಳೆ – 40 ಗ್ರಾಂ, ಕಿವಿ ಓಲೆ -8 ಗ್ರಾಂ ಚಿನ್ನವನ್ನು ನಸೀಮಾ ಹಾಗೂ ಅವರ ಜೊತೆಗೆ ಬಂದಿದ್ದ ಆಯಿಶಾ ಮಿಶ್ರೀಯಾ, ಮತ್ತು ರಮೀಜ್ ಎಂಬುವವರು ರಮೀಜ್ ರವರ ಅಟೋ ರಿಕ್ಷಾದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ.
ಹಾಗೂ 32,900/- ರೂಪಾಯಿ ಬೆಲೆ ಬಾಳುವ LG REFRIGERATOR FROST FREE 291 DD ಮತ್ತು 49000/- ಮೌಲ್ಯದ I Phone 13 (IMEI NO 357584547068058)̧ ವಾಷಿಂಗ್ ಮಿಷಿನ್ ನನ್ನು ಖರೀದಿಸುವುದಾಗಿ ತೆಗೆದುಕೊಂಡು ಹೋಗಿ ಹಣವನ್ನು ನೀಡಿರುವುದಿಲ್ಲ. ಹಾಗೂ ಸಾಲ ತೆಗೆಸಿಕೊಡುವುದಾಗಿ ನಂಬಿಸಿ ಅವ್ವಮ್ಮ ರಿಂದ ಬ್ಯಾಂಕ್ ಆಫ್ ಬರೋಡಾ ಕಟಪಾಡಿ ಮೂಡಬೆಟ್ಟು ಶಾಖೆಯ ಖಾಲಿ ಚೆಕ್ ಗೆ ಸಹಿ ಪಡೆದು ಚೆಕ್ಕನ್ನು ಪಡೆದುಕೊಂಡು ಸಾಲ ತೆಗೆಸಿಕೊಡದೆ ಮೋಸ ಮಾಡಿರುತ್ತಾರೆ. ಹಾಗೂ ಚಿನ್ನವನ್ನು ದೈವಜ್ಞ ಕ್ರೆಡಿಟ್-ಕೋ ಅಪರೇಟಿವ್ ಸೊಸೈಟಿ ಲೀ. ಕಟಪಾಡಿ ಶಾಖೆಯಲ್ಲಿ ಅಡವಿಟ್ಟಿರುವುದಾಗಿ ತಿಳಿದು ಅಲ್ಲಿಗೆ ಹೋಗಿ ಮ್ಯಾನೇಜರ್ ಗಿರೀಶ್ ಬಳಿ ವಿಚಾರಿಸಿದಾಗ ಆತನು ಚಿನ್ನವನ್ನು ನಮ್ಮ ಶಾಖೆಯಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದು, ಆತನು ತಾನೇ ಹಣ ಕಟ್ಟಿ ಚಿನ್ನವನ್ನು ಬಿಡಿಸಿಕೊಂಡು ಚಿನ್ನವನ್ನು ತಾನೇ ಖರೀದಿಸಿರುವುದಾಗಿ ಉಡಾಫೆ ವರ್ತನೆಯಲ್ಲಿ ತಿಳಿಸಿರುತಾನೆ.
ಈತನ ವರ್ತನೆಯು ಮೇಲ್ನೋಟಕ್ಕೆ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಆರೋಪಿ ನಸೀಮಾ, ರಮೀಜ್ ಮತ್ತು ಆಯಿಶಾ ಮಿಶ್ರೀಯಾ ಇವರುಗಳೊಂದಿಗೆ ಸೇರಿದ್ದಾನೆ . ಅವ್ವಮ್ಮ ರವರು ನಸೀಮಾ, ರಮೀಜ್, ಮತ್ತು ಆಯಿಶಾ ಮಿಶ್ರೀಯಾರವರುಗಳ ಬಳಿ ಚಿನ್ನ, ಐ ಪೋನ್ 13 ಹಾಗೂ ವಾಷಿಂಗ್ ಮಿಷನ್, ಚೆಕ್ಕನ್ನು ಮರಳಿ ನೀಡುವಂತೆ ಕೇಳಿದಾಗ ನಸೀಮಾ, ರಮೀಜ್, ಮತ್ತು ಆಯಿಶಾ ಮಿಶ್ರೀಯಾರು ಅವ್ವಮ್ಮ ರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಒಟ್ಟು 42,71,780/- ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವ್ವಮ್ಮ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 318(2), 318(4), 3163(2) BNS ರಂತೆ ಪ್ರಕರಣ ದಾಖಲಾಗಿದೆ.
