images-15.jpeg
Spread the love

ಮಲ್ಪೆ: ದಿನಾಂಕ 14/02/2026 (ಹಾಯ್ ಉಡುಪಿ ನ್ಯೂಸ್) ಕಡೆಕಾರು ಗ್ರಾಮದ ಸೀವ್ಯೂ ರೆಸಾರ್ಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದಲ್ಲಿಗೆ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಈರಣ್ಣ ಶಿರಗುಂಪಿ ಅವರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಈರಣ್ಣ ಶಿರಗುಂಪಿ, ಅವರಿಗೆ ದಿನಾಂಕ:13-02-2026 ರಂದು ಬಂದ ಸಾರ್ವಜನಿಕ ಮಾಹಿತಿಯಂತೆ ಉಡುಪಿ ತಾಲೂಕು ಕಡೆಕಾರು ಗ್ರಾಮದ ಸೀ ವ್ಯೂ ರೆಸಾರ್ಟ್‌ ಸಮೀಪ ಕಡೆಕಾರ್‌ ಪಡುಕೆರೆ ಹೊಳೆಯ ಕಡವಿನ ಬಾಗಿಲು ಬಳಿ ತಲುಪಿ ನೋಡಿದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇರುವ ಒಂದು ಹಳೆ ತಂಗುದಾಣದಲ್ಲಿ 5-6 ಜನರು ಮೊಬೈಲ್‌ ಫೋನ್‌ ಲೈಟ್‌ ಆನ್‌ ಮಾಡಿಕೊಂಡು ನ್ಯೂಸ್‌ ಪೇಪರ್‌ ಹಾಸಿಕೊಂಡು ಕುಳಿತುಕೊಂಡಿದ್ದು, ಅವರಲ್ಲಿ ಓರ್ವ ವ್ಯಕ್ತಿಯು ಇಸ್ಪೀಟ್ ಎಲೆಗಳನ್ನು ಹಿಡಿದುಕೊಂಡು ಇಸ್ಪೀಟ್ ಆಟ ಆಡುತ್ತಾ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ಸ್ಥಳಕ್ಕೆ  ದಾಳಿ ಮಾಡಿದಾಗ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದವರ ಪೈಕಿ ಓರ್ವ ವ್ಯಕ್ತಿ ಓಡಿ ಹೋಗಿದ್ದು ಉಳಿದ 5 ಜನರನ್ನು ಪೊಲೀಸರು ಸುತ್ತುವರಿದು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿದಾಗ 1) ನಿತಿನ್ ರಾಜ್ ಪ್ರಾಯ(35), 2). ಸಚಿನ್ ಆರ್ ಶೆಟ್ಟಿ(35), 3). ಸತೀಶ್ ಯಾನೆ ಕಿಶೋರ್ (38) , 4). ರಂಜಿತ್ ಕೆ ಅಮೀನ್ (39), 5) ರವಿ (36) ಎಂದು ತಿಳಿಸಿದ್ದು, ಓಡಿ ಹೋದ ವ್ಯಕ್ತಿಯ ಬಗ್ಗೆ ಕೇಳಿದಾಗ ಆತನು ಉದ್ಯಾವರದ ಕಿಶೋರ ಎಂದು ತಿಳಿಸಿರುತ್ತಾರೆ.

ದಾಳಿ ನಡೆಸಿದ ಸ್ಥಳದಲ್ಲಿದ್ದ ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸ್ವತ್ತುಗಳಾದ 1) ಹಳೆ ನ್ಯೂಸ್‌ ಪೇಪರ್‌ ಹಾಳೆಗಳು, 2) ಇಸ್ಪೀಟ್ ಎಲೆಗಳು. 3) ನಗದು ಹಣ ರೂಪಾಯಿ  4,90,920/- ಹಾಗೂ ಬೆಳಕಿಗೆ ಉಪಯೋಗಿಸಿದ 4 ಮೊಬೈಲ್‌ ಫೋನ್‌ , 5) ಕಪ್ಪು ಬಣ್ಣದ ಮೊಬೈಲ್ ಪವರ್ ಬ್ಯಾಂಕ್ , 1) TOYOTA ಕಂಪೆನಿಯ ಬಳಿ ಬಣ್ಣದ KA-47-P-0047 ನೇ ನಂಬ್ರದ FORTUNER ಕಾರು, 2) KA-19-MM-8550 ನೇ ನಂಬ್ರದ ಮಾರುತಿ ಸುಜುಕಿ ಕಂಪೆನಿಯ ಬಿಳಿ ಬಣ್ಣದ swift ಕಾರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 112 BNS , 87 KP Act ರಂತೆ ಪ್ರಕರಣ ದಾಖಲಾಗಿದೆ .

error: No Copying!