IMG_20260213_171147.jpg
Spread the love

ಕೋಟ: ದಿನಾಂಕ: 13/02/2026 (ಹಾಯ್ ಉಡುಪಿ ನ್ಯೂಸ್) ಮೊಳಹಳ್ಳಿ ಗ್ರಾಮದ ಮರತ್ತೂರಿನ ವಾರಾಹಿ ನದಿಯಿಂದ ಮರಳು ಕಳ್ಳತನ ನಡೆಸುತ್ತಿದ್ದ 21 ಜನ ಮರಳು ಕಳ್ಳ ರನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್, ಅವರಿಗೆ ದಿನಾಂಕ:12-02-2026 ರಂದು ಬಂದ ಸಾರ್ವಜನಿಕ ಮಾಹಿತಿಯಂತೆ ಮಧ್ಯಾಹ್ನ ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ರಾಶಿ ಹಾಕಿದ ಸ್ಥಳಕ್ಕೆ ಪೊಲೀಸರು ಹೋದಾಗ ಸುಮಾರು 15 ರಿಂದ 20 ಜನ ಕೆಲಸದವರು ಮರಳು ರಾಶಿ ಹಾಕುತ್ತಿದ್ದು ಅಲ್ಲೇ ಪಕ್ಕದ ಹೊಳೆಯಲ್ಲಿ 3 ಬೋಟ್ ಗಳು ನಿಲ್ಲಿಸಿರುವುದು ಕಂಡುಬಂದಿರುತ್ತದೆ.

ಪೊಲೀಸರು ಮರಳು ರಾಶಿ ಹಾಕುತ್ತಿರುವ ಕೆಲಸದವರ ಬಳಿ ವಿಚಾರಿಸಿದಾಗ ಹಳ್ನಾಡಿನ ದೇವಾನಂದ ಶೆಟ್ಟಿ ಎಂಬವರು ವರಾಹಿ ನದಿಯಿಂದ ಮರಳು ತೆಗೆಯಲು ತಿಳಿಸಿರುವ ಬಗ್ಗೆ ತಿಳಿಸಿರುತ್ತಾರೆ. ಪೊಲೀಸರು ನಂತರ ಸ್ಥಳಕ್ಕೆ ಗಣಿ ಅಧಿಕಾರಿಯವರನ್ನು ಬರಮಾಡಿಕೊಂಡು ವಿಚಾರಿಸಿದಾಗ ಗಣಿ ಇಲಾಖೆಯಿಂದ ಯಾವುದೇ ಪರವಾನಿಗೆ ನೀಡಿಲ್ಲವಾಗಿ ತಿಳಿಸಿರುತ್ತಾರೆ.

ದೇವಾನಂದ ಶೆಟ್ಟಿ ಹಳ್ನಾಡು ಇತನು ಮರಳು ರಾಶಿ ಹಾಕಿದ ಜಾಗದ ಮಾಲಕರ ಜೊತೆ ಹಾಗೂ ಆತನ 21 ಜನ ಕೆಲಸಗಾರರಾದ 1. ಅಮರೇಶ(27),2.ಕೃಪಾಲ್(32),3.ಪರಶುರಾಮ(35), 4.ಪ್ರಬೀನ್ (20),5.ರಾಮ ಚರಣ್(35),6.ಸತ್ರೊಹನ್(28),7.ರಾಮ ಅವತಾರ್ (21),8.ಬಿಮಲೇಶ್(23), 9.ರಾಮಲಾಲ್(40), 10.ಬೊಲಾ(23), 11.ಸಂಜಯ(27),12.ಹಿರ್ದಿಯ್ರಾಮ (27),13.ಸರ್ವನ್(21), 14.ಮುಖೇಶ(24),15.ಕರಣ್(21), 16.ಪ್ರೀನ್ಸ್(19), 17.ಕಿಶುನ್(19), 18.ಸುರಾಜ (30), 19.ನೀರಾಜ (22),20. ಕಲ್ಲು (19),21.ರಾಜಿವ(26) ಎಲ್ಲರ ವಿಳಾಸ: ಉತ್ತರಪ್ರದೇಶ ಇವರ ಜೊತೆ ಸೇರಿಕೊಂಡು ಯಾವುದೇ ಪರವಾನಿಗೆ ಆಗಲೀ ದಾಖಲಾತಿ ಇಲ್ಲದೇ ವರಾಹಿ ನದಿಯಿಂದ ಲಾಭಗಳಿಸುವ ಉದ್ದೇಶಗೋಸ್ಕರ ಸಂಘಟಿತವಾಗಿ ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡಿ ಸ್ವಂತ ಲಾಭಕ್ಕೋಸ್ಕ ರ ಬೇರೆಯವರಿಗೆ ಮಾರಾಟ ಮಾಡಲು ಮರಳನ್ನು ರಾಶಿ ಹಾಕುತ್ತಿದ್ದನು.

ರಾಶಿ ಹಾಕಿದ ಸುಮಾರು 315 ಯುನಿಟ್ ಮರಳು ಹಾಗೂ ಮರಳು ತೆಗೆಯಲು ಬಳಸಿದ ಪೈಬರ್ ಬೋಟ್-3 , ಮರಳು ತುಂಬಲು ಬಳಸಿದ ಮರದ ಹಿಡಿ ಇರುವ ಕಬ್ಬಿಣದ ಹಾರೆ -6, ಪೈಬರ್ ಬುಟ್ಟಿ-8 ನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2), 112, R/w 3(5) BNS 4,4(1A) , 21 MMRD ACT ರಂತೆ ಪ್ರಕರಣ ದಾಖಲಾಗಿದೆ.

error: No Copying!