istockphoto-872979154-612x612.jpg
Spread the love

ಕುಂದಾಪುರ: ಗುಲ್ವಾಡಿ ಗ್ರಾಮದ ಕರ್ಕಿ ಅಂಗನವಾಡಿ ಶಾಲೆಯಲ್ಲಿ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪ್ರಶ್ನಿಸಿದ್ದಕ್ಕೆ ಅವರು ಬಾಟಲಿ ಒಡೆದು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ವಿನಯ್ ಎಂಬವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕುಂದಾಪುರ,ಹಟ್ಟಿಯಂಗಡಿ ಗ್ರಾಮದ ನಿವಾಸಿ ವಿನಯ್ (32) ಎಂಬವರು ದಿನಾಂಕ 08/02/2026 ರಂದು  ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕರ್ಕಿ ಅಂಗನವಾಡಿ ಶಾಲೆಯ ಬಳಿ ಇರುವ ಯಕ್ಷಿ ಗ್ರೌಂಡ್ ನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟವನ್ನು ಮುಗಿಸಿ ಸ್ವತ್ತುಗಳನ್ನು ತೆರವುಗೊಳಿಸುವಾಗ ಸಮೀಪದಲ್ಲಿರುವ ಕರ್ಕಿ ಅಂಗನವಾಡಿ ಶಾಲೆಯ ಒಳಗಡೆ ಆಪಾದಿತ ಪ್ರಸಾದ್   ಯಾನೆ  ರಬಡ ಮತ್ತು ಇನ್ನೊಬ್ಬ ವ್ಯಕ್ತಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು ವಿನಯ್ ರವರು ಹಾಗೂ ಸ್ನೇಹಿತರಾದ ಲೋಕೇಶ, ಸುದರ್ಶನ ಎಂಬವರು ನೋಡಿ ಲೋಕೇಶ ರವರು ಆಪಾದಿತರಿಗೆ ಮದ್ಯಪಾನ ಮಾಡಲು ಬೇರೆ ಜಾಗ ಇಲ್ಲವಾ, ಸಣ್ಣ ಮಕ್ಕಳು ಕಲಿಯುವ ಅಂಗನವಾಡಿ ಶಾಲೆಯಲ್ಲಿ ಮದ್ಯಪಾನ ಮಾಡುತ್ತಿದ್ದೀರಲ್ಲಾ, ಇಲ್ಲಿಂದ ಹೋಗಿ ಎಂದು ಹೇಳಿದ್ದು ಆಗ ರಬಡ ಯಾನೆ ಪ್ರಸಾದನು ಏಕಾಏಕಿ ಕೋಪಗೊಂಡು ಮದ್ಯ ಕುಡಿಯಲು ಇಟ್ಟುಕೊಂಡಿದ್ದ ಬೀಯರ್ ಬಾಟಲಿ ಹಿಡಿದುಕೊಂಡು ಅಲ್ಲಿಯೇ ಒಡೆದು ಅದರಿಂದ ಲೋಕೇಶನ ತಲೆಗೆ ಜೋರಾಗಿ ಹೊಡೆದಿದ್ದು ಲೋಕೇಶನು ತಪ್ಪಿಸಿಕೊಂಡಾಗ ಬಾಟಲಿಯ ಪೆಟ್ಟು ಮುಖಕ್ಕೆ ಬಿದ್ದಿರುತ್ತದೆ. ಪರಿಣಾಮ ಲೋಕೇಶನ ಮುಖಕ್ಕೆ ತೀವೃ ಸ್ವರೂಪದ ಗಾಯ ಉಂಟಾಗಿ ರಕ್ತ ಬಂದಿರುತ್ತದೆ

ಆ ಸಮಯ ರಬಡ ಯಾನೆ ಪ್ರಸಾದನೊಂದಿಗಿದ್ದ ಇನ್ನೊಬ್ಬ ವ್ಯಕಿ ಕೂಡ ಬಿಡಬೇಡ ಅವನಿಗೆ ಹೊಡಿ ಎಂದು ರಬಡ ಯಾನೆ ಪ್ರಸಾದನಿಗೆ ಪ್ರಚೋದಿಸಿ ಕತ್ತಲೆಯಲ್ಲಿ ಓಡಿ ಹೋಗಿರುತ್ತಾನೆ. ಆಪಾದಿತರು ಈರ್ವರು ಲೋಕೇಶ್ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿ ಕೊಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ವಿನಯ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ   ಕಲಂ: 352, 351(2), 118(1), 109 R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!