images-7.jpeg
Spread the love

ಮಣಿಪಾಲ: ದಿನಾಂಕ:07-02-2026(ಹಾಯ್ ಉಡುಪಿ ನ್ಯೂಸ್) ಕುಂಜಿಬೆಟ್ಟು ನಿವಾಸಿ ಈಶ್ವರ ಎಂಬವರ ಮನೆಗೆ ಬಂದ ಬ್ಯಾಂಕ್ ವಸೂಲಾತಿ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ನಿವಾಸಿ ಈಶ್ವರ (32) ಎಂಬವರ ಮನೆಗೆ ದಿನಾಂಕ: 06/02/2026 ರಂದು ಬೆಳಿಗ್ಗೆ  ಎಸ್.ಡಿ.ಸಿ.ಸಿ ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿಕೊಂಡು ಸುಲೋಚನಾ, ಕೃಷ್ಣ , ಮತ್ತು ಹರಿಣಾಕ್ಷಿ ಎಂಬುವವರು  ಬಂದು ಈಶ್ವರ ಅವರ ತಾಯಿಯನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈಶ್ವರ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ:329(3),352,351(2) ಜೊತೆಗೆ 3(5) BNS ಮತ್ತು 3(1)(r)(s), 3(2)(v-a) SC ST ACT ರಂತೆ ಪ್ರಕರಣ ದಾಖಲಾಗಿದೆ.

error: No Copying!