IMG_20260205_102918.jpg
Spread the love

ಮಣಿಪಾಲ: ದಿನಾಂಕ :05-02-2026(ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು 7 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ ಎಂದು ಅಮಿತಾ ಡ್ಯಾನಿಯಲ್‌ ಕರ್ಕಡ ಎಂಬವರು ದೂರು ದಾಖಲಿಸಿದ್ದಾರೆ.

ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ಅಮಿತಾ ಡ್ಯಾನಿಯಲ್ ಕರ್ಕಡ (36)ಎಂಬವರು ದಿನಾಂಕ 03/02/2026 ರಂದು  ಮನೆಯ ಬಾಗಿಲು ಮತ್ತು ಹೊರಗಿನ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿದ್ದು ದಿನಾಂಕ 04/02/2026 ರಂದು ಮದ್ಯಾಹ್ನ  ಬಾಗಿಲು ತೆರೆದಿರುವುದಾಗಿ ಪಕ್ಕದ ಮನೆಯವರು ಅಮಿತಾ ಡ್ಯಾನಿಯಲ್ ಕರ್ಕಡ ರವರಿಗೆ ತಿಳಿಸಿದ್ದು ಅಮಿತಾ ಡ್ಯಾನಿಯಲ್ ಕರ್ಕಡ ರವರು  ಬಂದು ನೋಡಿದಾಗ ಯಾರೋ ಕಳ್ಳರು ಅಮಿತಾ ಡ್ಯಾನಿಯಲ್ ಕರ್ಕಡ ರವರ ಮನೆಯಲ್ಲಿದ್ದ 75 ಗ್ರಾಂ ತೂಕದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!