gettyimages-455754124-612x612.jpg
Spread the love

ಗಂಗೊಳ್ಳಿ: ದಿನಾಂಕ:02-02-2026(ಹಾಯ್ ಉಡುಪಿ ನ್ಯೂಸ್) ಟ್ಯಾಟೂ ಹಾಕುವ ಕೆಲಸ ಗಾರನೋರ್ವ ಹಾಕಿದ ಟ್ಯಾಟೂ ಸರಿಯಾಗಿಲ್ಲ ಎಂದು ಆರೋಪಿಸಿ ಆತನನ್ನು ಥಳಿಸಿ ಆತನನ್ನು ಏರ್ ಗನ್ ನಿಂದ ಶೂಟ್ ಮಾಡಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಣಿಪಾಲ,ದಶರಥ ನಗರ ನಿವಾಸಿ ವಿವೇಕ್ ಯು (30) ಎಂಬವರು ಹೆಚ್ಚೆ(ಟ್ಯಾಟೂ) ಹಾಕುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 29/01/2026 ರಂದು ರಾತ್ರಿ  ವಿವೇಕ್ ಯು ರವರು ಅವರ ಪರಿಚಯದ  ಸಾಗರ್‌ ಎಂಬವನಿಗೆ ವಿವೇಕ್ ರವರ ಮನೆಯಲ್ಲಿ  ಅರ್ಧ ಹಚ್ಚೆ ಹಾಕಿಸಿ ನಂತರ ಟ್ಯಾಟೂವನ್ನು  ಪೂರ್ತಿಗೊಳಿಸಲು ದಿನಾಂಕ 30/01/2026 ರಂದು ಆಪಾದಿತ ಸಾಗರನ ಬಾಡಿಗೆ  ಮನೆಯಾದ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ಸಾಲಾಡಿ ಎಂಬಲ್ಲಿಗೆ ಕರೆದುಕೊಂಡು ಬಂದಿದ್ದು  ದಿನಾಂಕ 31/01/2026 ರಂದು ಬೆಳಿಗ್ಗೆ 06:00 ಗಂಟೆಯ ಸುಮಾರಿಗೆ ವಿವೇಕ್ ರವರು ಸಾಗರನ  ಬಾಡಿಗೆ ಮನೆಯಲ್ಲಿ ಮಲಗಿರುವ ಸಮಯ ಆಪಾದಿತ ಸಾಗರನು ವಿವೇಕ್ ರವರ ಮುಖಕ್ಕೆ ನೀರು ಹಾಕಿ ಎಬ್ಬಿಸಿ ನನಗೆ ಹಾಕಿದ ಹಚ್ಚೆ ಸರಿಯಾಗಿಲ್ಲವೆಂದು ತಕರಾರು ತೆಗೆದು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಸಾಗರನ ಜೊತೆಗಿದ್ದ ಸುಮಂತ್‌ ಹಾಗೂ ಆದಿತ್ಯರವರು ವಿವೇಕ್ ರವರನ್ನು ಹಗ್ಗದಿಂದ ಕಟ್ಟಿಹಾಕಿ  ಕಿರುಕುಳ ನೀಡಿ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿ  ಮದ್ಯಾಹ್ನ ಹೊತ್ತಿಗೆ ವಿವೇಕ್ ರವರು ನೋವಿನಿಂದ ಕೂಗಿಕೊಂಡಾಗ ಸಾಗರನು ತನ್ನ ಮನೆಯಲ್ಲಿರುವ Air Gun ತಂದು “ನಿನ್ನನ್ನು ಕೊಂದೆ ಹಾಕುತ್ತೇನೆ ಎಂದು ಹೇಳಿ ವಿವೇಕ್ ರವರ ಎದೆಗೆ Air Gunನಿಂದ ಗುಂಡು ಹಾರಿಸಿರುತ್ತಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವೇಕ್ ತಿಳಿಸಿದ್ದಾರೆ. ಗಾಯಗೊಂಡ ವಿವೇಕ್ ರವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ: 352,127(2), 115(2),109 ಜೊತೆಗೆ 3(5) BNS ಮತ್ತು ಕಲಂ 3,25 Indian Arms Act ರಂತೆ ಪ್ರಕರಣ ದಾಖಲಾಗಿದೆ.

error: No Copying!