IMG_20260202_181040.jpg
Spread the love

ಕಾಪು: ದಿನಾಂಕ:02-02-2026(ಹಾಯ್ ಉಡುಪಿ ನ್ಯೂಸ್) ಬೆಳಪು ಪಣಿಯೂರು ನಿವಾಸಿ ಚಲನಚಿತ್ರ ನಿರ್ಮಾಪಕ ನಿತಿನ್ ಕುಮಾರ್ ಪಣಿಯೂರು (45) ಅವರು ಇಂದು ಬೆಳಗ್ಗೆ ಹ್ರದಯಾಘಾತದಿಂದ ಸ್ವಗ್ರಹದಲ್ಲಿ ನಿಧನರಾದರು.

ಈ ಹಿಂದೆ ಬೆಂಗಳೂರಿನಲ್ಲಿ  ಚಲನಚಿತ್ರ ನಿರ್ಮಾಪಕರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ  ನಿತಿನ್ ಕುಮಾರ್ ಪಣಿಯೂರು ಅವರು ಆ ನಂತರ ತುಳು ಚಲನಚಿತ್ರ ನಿರ್ಮಾಪಕರಾಗಿ ಗುರುತಿಸಿ ಕೊಂಡು “ಗುಡ್ಡೆದ ಭೂತ” ಎಂಬ ತುಳು ಚಲನಚಿತ್ರ ದ ನಿರ್ಮಾಪಕರಾಗಿದ್ದರು.

ಇಂದು ಪಣಿಯೂರಿನ ತನ್ನ ಮನೆಯಲ್ಲಿ ಬೆಳಗ್ಗೆ 8-30ರ ಸಮಯ ಹ್ರದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ, ತಾಯಿ, ಹಾಗೂ ತಮ್ಮ ನನ್ನು  ಅಗಲಿದ್ದಾರೆ. ತುಳು ಚಲನಚಿತ್ರ ರಂಗದ ಯುವ ಪ್ರತಿಭಾವಂತ ನಿರ್ಮಾಪಕನ ಅಗಲಿಕೆಯಿಂದ ತುಳು ಚಲನಚಿತ್ರ ರಂಗ ಓರ್ವ ಪ್ರತಿಭಾವಂತ ನಿರ್ಮಾಪಕನನ್ನು  ಕಳೆದುಕೊಂಡಿದೆ ಎಂದು ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

error: No Copying!