ಈ ಬಾರಿಯ ಆಯವ್ಯಯ ಜನಸಾಮಾನ್ಯರಿಗೂ ತಲುಪುವಂತಿದೆ. ದೇಶದ ಭವಿಷ್ಯವನ್ನು ರೂಪಿಸುವ ಬಜೆಟ್ ಇದಾಗಿದೆ ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ.
ಕ್ರೀಡೆಗಳಿಗೆ ಉತ್ತೇಜನ ನೀಡಲು ಖೇಲೋ ಇಂಡಿಯಾ ಮಿಷನ್ ಘೋಷಣೆ, ಟಯರ್ 2 ಹಾಗೂ 3 ನಗರಗಳ ಅಭಿವೃದ್ಧಿ, ಖಾದಿ ಕೈಮಗ್ಗವನ್ನು ಬಲಪಡಿಸಲು ಮಹಾತ್ಮಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ ಆರಂಭಿಸುವುದಾಗಿ ಮೋದಿ ಸರ್ಕಾರ ಘೋಷಣೆ ಮಾಡಿದೆ.
ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ ‘SHE-MART’ ಆರಂಭಿಸುವುದಾಗಿ ಘೋಷಿಸಿರುವುದು ಮೋದಿ ಸರ್ಕಾರ ನಾರಿ ಶಕ್ತಿಗೆ ಬೆಂಬಲವಾಗಿ ನಿಂತಿರುವುದನ್ನು ಸೂಚಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶವನ್ನು ಬಲಿಷ್ಠಗೊಳಿಸುವ ಬಜೆಟ್ ಮಂಡಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಮೋದಿ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
