IMG-20260130-WA0218.jpg
Spread the love

ಉಡುಪಿ: ದಿನಾಂಕ:30-01-2026(ಹಾಯ್ ಉಡುಪಿ ನ್ಯೂಸ್) ಕೇಂದ್ರದ ಮೋದಿ ಸರಕಾರದ ವಿರುದ್ಧ ಉಡುಪಿ ಬನ್ನಂಜೆಯ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ ಮುಷ್ಕರ ನಡೆಯಿತು.

ಕೇಂದ್ರ ಸರಕಾರವು ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಕಾಯಿದೆಯನ್ನು ಪುನಃ ಜಾರಿಗೊಳಿಸಬೇಕೆಂದು ಆಗ್ರಹಿಸಿ ಇಂದು ಬನ್ನಂಜೆ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತರು ಸುರೇಶ್ ಶೆಟ್ಟಿ ಬನ್ನಂಜೆ ಇವರ ನೇತೃತ್ವದಲ್ಲಿ ಉಡುಪಿ ತಾಲೂಕು ಆಫೀಸ್ ಪಕ್ಕದಲ್ಲಿ ಧರಣಿ ಮುಷ್ಕರವನ್ನು ನಡೆಸಿದರು.

ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ ಪ್ರಸಾದ್ ರಾಜ್ ಕಾಂಚನ್ ಕೆಪಿಸಿಸಿ ಸದಸ್ಯರಾದ ಶ್ರೀ ದಿನೇಶ್ ಪುತ್ರನ್ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನಕರ್ ಹೇರೂರು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀ ಶೇಖರ್ ಶೆಟ್ಟಿ ಶ್ರೀ ಪ್ರಭಾಕರ್ ಶೆಟ್ಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಡಾಕ್ಟರ್ ಸಂದೀಪ್ ಸನಿಲ್  ಶ್ರೀ ಸುರೇಂದ್ರ ಶ್ರೀ ಅಜರುದ್ದೀನ್ ಶ್ರೀ ಪ್ರವೀಣ್ ಪ್ರಭಾಕರ್ ಶ್ರೀ ರವಿ ಶೆಟ್ಟಿ ಶ್ರೀ ಪ್ರಭಾಕರ್ ಶೆಟ್ಟಿ ಕರಾವಳಿ .ಹಬೀಬ್ ಆಲಿ ಶ್ರೀ ಸದಾಶಿವ ಕಟ್ಟೆಗುಡ್ಡೆ ಶ್ರೀ ಚೇತನ್ ಪೂಜಾರಿ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

error: No Copying!