IMG_20260205_163325.jpg
Spread the love

ಮಣಿಪಾಲ: ದಿನಾಂಕ: 05-02-2026(ಹಾಯ್ ಉಡುಪಿ ನ್ಯೂಸ್) ವಿದ್ಯಾರತ್ನ ನಗರದ ಮಾಂಡವಿ ಪ್ಯಾಲೇಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಐವರು ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್‌.ಬಿ.ಎನ್‌. ಅವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಮಾಂಡವಿ ಪ್ಯಾಲೇಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಮದ್ಯ ಸೇವನೆ ಮಾಡುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದಂತೆ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿದ್ದಾರೆ.

ಆಲ್ಲಿ ಯುವಕರು ಮದ್ಯಪಾನ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಅವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 1) ವರುಣ್. 2) ಆದಿತ್ಯ ದೇವ್‌ ಎಸ್‌,3) ಥಾರೇಶ್ ಎಂ ವಿ. 4) ಅರ್ನಭ್ ಬೈದ್ಯ 5) ಕಾರ್ತಿಕ ಪ್ರಸಾದ ಎಂಬುದಾಗಿ ತಿಳಿಸಿದ್ದು ಅವರುಗಳನ್ನು ವಿಚಾರಣೆ ನಡೆಸಿದಾಗ  ನಾವುಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಪೊಲೀಸರು ಮದ್ಯಪಾನ ಮಾಡಿರುವ ಸ್ಥಳವನ್ನು ಪರಿಶೀಲಿಸಿದಾಗ KINGFISHER STRONG ಎಂಬ ಹೆಸರಿನ 650 ML ನ ತುಂಬಿರುವ ಬಾಟಲಿ – 01, 2) KINGFISHER STRONG ಎಂಬ ಹೆಸರಿನ 330 ML ನ ಖಾಲಿ ಇರುವ ಬಾಟಲಿ -2 ಹಾಗೂ 3) HOEGAARDEN WIBER ಎಂದು ಬರೆದಿರುವ ಅರ್ಧ ತುಂಬಿದ ಟಿನ್ ಬಾಟಲಿ -1,4) OLD MONK ವೇರಿ ಓಲ್ಡ್ ವ್ಯಾಟೆಡ್ ಸ್ಪೆಷಲ್ ಟ್ರಿಪಲ್ ಎಕ್ಸ್ ರಮ್ ಎಂದು ಬರೆದಿರುವ ಖಾಲಿ ಪ್ಯಾಕೇಟ್ -1, 5) ಖಾಲಿ ಪ್ಲಾಸ್ಟಿಕ್ ಗ್ಲಾಸ್ -1, ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ  ಕಲಂ: 15(A) KE Act ರಂತೆ ಪ್ರಕರಣ ದಾಖಲಾಗಿದೆ.

error: No Copying!