IMG_20260130_074830.jpg
Spread the love

ಕುಂದಾಪುರ:ದಿನಾಂಕ :30-01-2026(ಹಾಯ್ ಉಡುಪಿ ನ್ಯೂಸ್)

ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಕುಂದಾಪುರ ಪೊಲೀಸ್ ಠಾಣೆ ,ತಾಲೂಕು ಕಾನೂನು ಸೇವೆಗಳ ಸಮಿತಿ ಬಾರ್ ಅಸೋಸಿಯೇಷನ್(ರಿ) ಅಭಿಯೋಗ ಇಲಾಖೆ ಹಾಗೂ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಒನ್ ಸೈಟ್ ಎಸೈಲಾರ್ ಲಕ್ಸೋಟಿಕ ಫೌಂಡೇಶನ್ (ರಿ) ಬೆಂಗಳೂರು , ಕುಂದಾಪುರ ತಾಲೂಕು ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ – 2026 ಅಂಗವಾಗಿ ದಿನಾಂಕ :29-01-2026 ರಂದು ಕುಂದಾಪುರ ಪೊಲೀಸ್‌ ಲೈನ್ ನಲ್ಲಿರುವ ರಕ್ತೇಶ್ವರಿ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿ,ಖಾಸಗಿ ಬಸ್ಸು, ಸ್ಕೂಲ್ ಬಸ್ ,ಟೆಂಪೋ, ರಿಕ್ಷಾ ಹಾಗೂ ಇತರ ವಾಹನ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆರೋಗ್ಯ ಶಿಬಿರ ಕಾರ್ಯಗಾರ ನಡೆಯಿತು.

ಕಾರ್ಯಾಗಾರವನ್ನು ಶ್ರೀ ಜಯರಾಮ್ ಡಿ ಗೌಡ( ಪೋಲಿಸ್ ನಿರೀಕ್ಷಕರು ಕುಂದಾಪುರ ಠಾಣೆ) ಹಾಗೂ ಅನೂಪ್ ನಾಯಕ್ (ಪಿಎಸ್ಐ 1 , ಕುಂದಾಪುರ ಸಂಚಾರ ಠಾಣೆ), ಶ್ರೀಮತಿ ಸುಧಾ ಪ್ರಭು (ಪಿಎಸ್ಐ-2 ಕುಂದಾಪುರ ಸಂಚಾರ ಠಾಣೆ) ಹಾಗೂ ಪ್ರಸಾದ ನೇತ್ರಾಲಯದ ಡಾ. ಕ್ರೀನಾ(ಐ ಸ್ಪೆಷಲಿಸ್ಟ್, ಪ್ರಸಾದ್ ನೇತ್ರಾಲಯ ಉಡುಪಿ) & ಮೋಹನ್ ದಾಸ್ (P.R.O, ಪ್ರಸಾದ್ ನೇತ್ರಾಲಯ ಉಡುಪಿ) & ಶ್ರೀಮತಿ ಮೇಧಿನಿ (C.H.O ತಾಲೂಕು ಹಾಸ್ಪಿಟಲ್ ಕುಂದಾಪುರ)ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧಿಕಾರಿಗಳಾದ ಶ್ರೀಮತಿ ಗಾಯಿತ್ರಿ, ಶ್ರೀಮತಿ ರಮೀಜಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿಗಳು ಕುಂದಾಪುರ ರವರು ಕಾರ್ಯಗಾರವನ್ನು ಉದ್ಘಾಟಿಸಿದರು.

ಕಾರ್ಯಗಾರದಲ್ಲಿ ರಸ್ತೆ ಅಪಘಾತ ತಡೆಗಟ್ಟುವಲ್ಲಿ ಆರೋಗ್ಯ ಮತ್ತು ಕಣ್ಣಿನ ದೃಷ್ಟಿಯ ಮಹತ್ವದ ಬಗ್ಗೆ ಸೂಕ್ತ ಮಾಹಿತಿ ನೀಡಿ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಪೊಲೀಸ್ ಅಧಿಕಾರಿ ಸಿಬ್ಬಂದಿ, ಖಾಸಗಿ ಬಸ್ಸು, ಸ್ಕೂಲ್ ಬಸ್ ,ಟೆಂಪೋ, ರಿಕ್ಷಾ ಹಾಗೂ ಇತರ ವಾಹನ ಚಾಲಕರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರಿಗೆ, ವಾಹನದ ಚಾಲಕರಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿ ,ಕನ್ನಡಕದ ಅಗತ್ಯ ಇದ್ದಲ್ಲಿ, ಉಚಿತವಾಗಿ ಕನ್ನಡಕ ವಿತರಿಸಲಾಯಿತು ಹಾಗೂ ಕುಂದಾಪುರ ತಾಲೂಕು ವೈದ್ಯರು ವಾಹನ ಚಾಲಕರಿಗೆ ಉಚಿತವಾಗಿ B.P & SUGER TEST ಮಾಡಿ, ಆರೋಗ್ಯ ಸಮಸ್ಯೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಈ ಕಾರ್ಯಗಾರದಲ್ಲಿ ಸುಮಾರು 200 ರಿಂದ 250 ಫಲಾನುಭವಿಗಳು ಈ ಕಾರ್ಯಗಾರದ ಉಪಯೋಗವನ್ನು ಪಡೆದುಕೊಂಡಿದ್ದಾರೆ.

error: No Copying!