ಬ್ರಹ್ಮಾವರ: ದಿನಾಂಕ:28-01-2026(ಹಾಯ್ ಉಡುಪಿ ನ್ಯೂಸ್)
ದಿನಾಂಕ:28.01.2026ರಂದು ಹನೆಹಳ್ಳಿ ಗ್ರಾಮದ ಕಂಪ ಎಂಬಲ್ಲಿ ಬಾರ್ಕೂರು-ಉಡುಪಿ ರೈಲ್ವೆ ನಿಲ್ದಾಣಗಳ ರೈಲ್ವೆ ಹಳಿ ಕಂಬ 676/20 ರಿಂದ 676/22ರ ಕೀ.ಮಿ ಕಂಬದ ಮಧ್ಯೆ ರೈಲ್ವೆ ಹಳಿಯಲ್ಲಿ ಅಪರಿಚಿತ ಸುಮಾರು 50-55 ವರ್ಷ ಪ್ರಾಯದ ಗಂಡಸು ಸುಮಾರು ರಾತ್ರಿ ಸುಮಾರು 01:05 ಗಂಟೆಗೆ ಚಲಿಸುತ್ತಿದ್ದ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ.
ಬಾರ್ಕೂರು ರೈಲ್ವೆ ಸ್ಟೇಷನ್ , ಸ್ಟೇಷನ್ ಮಾಸ್ಟರ್ ಶ್ರೀನಿವಾಸ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.
