ಕುಂದಾಪುರ: ದಿನಾಂಕ: 27-01-2026(ಹಾಯ್ ಉಡುಪಿ ನ್ಯೂಸ್) ಉಳ್ಳೂರು ಜನತಾ ಕಾಲೊನಿ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿ ಯೋರ್ವರಿಗೆ ಸೇರಿದ ಜಾಗದಲ್ಲಿ ಗ್ರಾಮ ಪಂಚಾಯತ್ ಸದಸ್ಯ ನೋರ್ವ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕು,ಕಂದಾವರ ಗ್ರಾಮದ ಉಳ್ಳೂರು ಜನತಾ ಕಾಲೊನಿ ನಿವಾಸಿ ಚಂದ್ರಶೇಖರ S N (38) ಎಂಬವರು ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿರುತ್ತಾರೆ. ಚಂದ್ರಶೇಖರ ಅವರು ಕುಂದಾಪುರ ತಾಲೂಕು ಕಂದಾವರ ಗ್ರಾಮದ ಜನತಾ ಕಾಲೋನಿ ಉಳ್ಳೂರು ಎಂಬಲ್ಲಿ ಅವರ ಅಜ್ಜಿಯಾದ ಮಿಣುಕು ಅವರ ದರ್ಕಾಸ್ ಸ್ಥಳದಲ್ಲಿ ವಾಸವಾಗಿರುತ್ತಾರೆ.
ದಿನಾಂಕ 26/01/2026 ರಂದು ಬೆಳಿಗ್ಗೆ ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಶೇರೆಗಾರ ರವರು ಚಂದ್ರಶೇಖರ ಅವರ ಒಪ್ಪಿಗೆ ಇಲ್ಲದೆ ಚಂದ್ರಶೇಖರ ಅವರ ಜಾಗದಲ್ಲಿ ಬಲತ್ಕಾರವಾಗಿ ವಿದ್ಯುತ್ ಕಂಬವನ್ನು ಅಳವಡಿಸುವ ಪ್ರಯತ್ನ ಪಟ್ಟಿರುತ್ತಾರೆ.
ಅದನ್ನು ಚಂದ್ರಶೇಖರ ಅವರು ವಿರೋಧಿಸಿದಾಗ ಕಾಮಗಾರಿ ಸ್ಥಗಿತಗೊಳಿಸಿರುತ್ತಾರೆ. ರಾಮಚಂದ್ರ ಶೇರೆಗಾರ ಅವರು ನಡೆದುಕೊಂಡ ರೀತಿಯು ದಲಿತ ದೌರ್ಜನ್ಯ ಕಾಯಿದೆಗೆ ಒಳಪಟ್ಟಿರುವುದರಿಂದ ರಾಮಚಂದ್ರ ಶೇರೆಗಾರ ರವರ ಮೇಲೆ ದಲಿತ ದೌರ್ಜನ್ಯ ಪ್ರಕರಣವನ್ನು ದಾಖಲಿಸಬೇಕೆಂದು ಚಂದ್ರಶೇಖರ ಅವರು ಪೊಲೀಸರಿಗೆ ವಿನಂತಿಸಿಕೊಂಡಿದ್ದರು
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 329(3) BNS ಮತ್ತು ಕಲಂ 3(2)(va), SC/ST Act ರಂತೆ ಪ್ರಕರಣ ದಾಖಲಾಗಿದೆ.
