ಹಿರಿಯಡ್ಕ: ದಿನಾಂಕ:25-01-2026 (ಹಾಯ್ ಉಡುಪಿ ನ್ಯೂಸ್)ಪರೀಕ ಸ್ವರ್ಣ ನದಿಯಲ್ಲಿ ದೋಣಿ ಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ ಅವರು ಬಂಧಿಸಿದ್ದಾರೆ.
ದಿನಾಂಕ:24.01.2026 ರಂದು ರಾತ್ರಿ ಯಾರೋ ಆರೋಪಿಗಳು ಅತ್ರಾಡಿ ಗ್ರಾಮ ಪರೀಕ ಸ್ವರ್ಣ ನದಿಯಲ್ಲಿ ಅಕ್ರಮವಾಗಿ ದೋಣಿಯಲ್ಲಿ ಮರಳು ತುಂಬಿಕೊಂಡು ದಡಕ್ಕೆ ಬರುತ್ತಿರುವಾಗ ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ ರವರು ತಮ್ಮ ಸಿಬ್ಬಂದಿಯವರೊಂದಿಗೆ ಅಲ್ಲಿಗೆ ದಾಳಿ ಮಾಡಿದ್ದು ದೋಣಿಯಲ್ಲಿ ಇದ್ದವರು ಓಡಿ ಹೋಗಿದ್ದಾರೆ.
ಪಿಎಸ್ಐ ಯವರು ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲಿಸಿದಾಗ ನದಿಯಿಂದ 500 ಮೀಟರ್ ಅಂತರದಲ್ಲಿರುವ ಪ್ರಕಾಶ ಶೆಟ್ಟಿ ಎಂಬವರ ಮನೆಯ ಅಂಗಳದಲ್ಲಿ 6 ಟಿಪ್ಪರ್ ಲೋಡ್ ಗಳಷ್ಟು ಮರಳನ್ನು ಸಂಗ್ರಹಿಸಿದ್ದಲ್ಲದೇ ದೋಣಿಯಲ್ಲಿ ಸುಮಾರು 3 ಯುನಿಟ್ ಮರಳಿದ್ದು ಹೀಗೆ ಒಟ್ಟು 21 ಯುನಿಟ್ 42.000/-ರೂ ಮೌಲ್ಯದಾಗಿದ್ದು ದೋಣಿಯ ಬೆಲೆ 3.00.000 ರೂಪಾಯಿ ಆಗಬಹುದು ಸಂಗ್ರಹಿಸಿಟ್ಟಿರುವ ಮರಳನ್ನು ರತ್ನಾಕರ ಶೆಟ್ಟಿ ಪರೀಕರವರು ಇತರೆ ಆರೋಪಿತರೊಂದಿಗೆ ಸೇರಿ ಸಂಗ್ರಹಿಸಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಆಪಾದಿತ 1) ರತ್ನಾಕರ ಶೆಟ್ಟಿ 2) ಪ್ರಸಾದ್ ಮತ್ತು ಇತರರ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 303(2)̧ 112 BNS, ಮತ್ತು 4(1-a) 21(4) MMRD Act ರಂತೆ ಪ್ರಕರಣ ದಾಖಲಾಗಿದೆ.
