ಪಡುಬಿದ್ರಿ: ದಿನಾಂಕ :25-01-2026(ಹಾಯ್ ಉಡುಪಿ ನ್ಯೂಸ್) ಕೋಡಿ ನಿವಾಸಿ ರಜನಿ ಎಂಬವರು ಮುಂಬೈಗೆ ತೆರಳಿದ್ದಾಗ ಅವರ ಸಂಬಂಧಿಕರು ಮನೆಯಲ್ಲಿ ದ್ದ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಜಮಾಡಿ ಗ್ರಾಮ, ಕಾಪು ಕೋಡಿ ನಿವಾಸಿ ರಜನಿ (51) ಎಂಬವರು ಉದ್ಯೋಗದ ನಿಮಿತ್ತ ಮುಂಬೈನಲ್ಲಿ ವಾಸವಾಗಿದ್ದು ದಿನಾಂಕ: 21.01.2026 ರಂದು ಸಂಜೆ ರಜನಿ ರವರ ಸಂಬಂದಿಕರಾಧ ರೇಖಾ ಕಾಂಚನ್, 60 ವರ್ಷ, ಹೇಮಲತಾ ಕೋಟ್ಯಾನ್ ಪ್ರಾಯ 49 ವರ್ಷ, ದೇವದಾಸ್ ಕಾಂಚನ್ , ರೋಹಿತ್ ಕೋಟ್ಯಾನ್ , ಧನರಾಜ್ ಕಾಂಚನ್ , ಹಾಗೂ ಶ್ರೀಶಾ ಕೋಟ್ಯಾನ್ , ಎಂಬವರು ಮನೆಯ ಬಳಿ KA20ES 3529 ನೇ ನಂಬ್ರದ ವಾಹನದಲ್ಲಿ ಕೀ ಮೇಕರ್ ನ್ನು ಕರೆದುಕೊಂಡು ಬಂದು ಮನೆಯ ಪ್ರಧಾನ ಬಾಗಿಲನ್ನು ಒಡೆದು ಮನೆಯ ಒಳಗಡೆ ಹೋಗಿರುವುದನ್ನು ರಜನಿ ರವರು ಸಿಸಿ ಕ್ಯಾಮರಾ ಮೂಲಕ ನೋಡಿದ್ದರು.
ರಜನಿರವರು ಮನೆಗೆ ಬೀಗ ಹಾಕಿ ಮುಂಬೈಗೆ ಹೋಗುವಾಗ ಮನೆಯಲ್ಲಿ ಇಟ್ಟಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಂಗಳ ಸೂತ್ರ, ಒಂದು ಡೈಮಂಡ್ ಒಡ್ಡು ಉಂಗುರ, ಸುಮಾರು 11 ಗ್ರಾಂ ತೂಕದ ಚಿನ್ನದ ಚೈನ್ ಒಟ್ಟು ಚಿನ್ನದ ಅಂದಾಜು ಮೊತ್ತ 6.65,000/- ಹಾಗೂ, 2 ಬೆಳ್ಳಿಯ ಚೆಂಬು, 2 ಬೆಳ್ಳಿಯ ತಟ್ಟೆಗಳು, ಬೆಳ್ಳಿಯ ದೇವರ ಸಾಮಾಗ್ರಿಗಳು, 6 ಬೆಳ್ಳಿಯ ದೀಪಗಳು ಒಟ್ಟು ಬೆಳ್ಳಿ ಸಾಮಾಗ್ರಿಗಳ ಅಂದಾಜು ಮೊತ್ತ 1,27,000/-, ಹಾಗೂ 12,000 /- ನಗದು ಹಣ ಕಳವಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 329(4), 305(a) BNS ರಂತೆ ಪ್ರಕರಣ ದಾಖಲಾಗಿದೆ.
