ಉಡುಪಿ: ದಿನಾಂಕ : 14-01-2026(ಹಾಯ್ ಉಡುಪಿ ನ್ಯೂಸ್) ಸಾಲಗಾರರು ಸಾಲ ಕಟ್ಟದೆ ಇರುವ ಬಗ್ಗೆ ಸಾಲಕ್ಕೆ ಜಾಮೀನು ಹಾಕಿದವರು ಪ್ರಶ್ನಿಸಿದ್ದಕ್ಕೆ ಸಾಲ ಪಡೆದು ಕೊಂಡವರು ಹಲ್ಲೆ ನಡೆಸಿದ್ದಾರೆ ಎಂದು ಕೃಷ್ಣ ವೇಣಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ತಾಲೂಕು,ಪಲ್ಲಿಜಿಡ್ಡ ಮನೆ ನಿವಾಸಿ ಕ್ರಷ್ಣ ವೇಣಿ (32) ಎಂಬವರು ಆರೋಪಿತೆ ಭಾರತಿ ಸುವರ್ಣ ಹಾಗೂ ಅವರ ತಮ್ಮನ ಹೆಂಡತಿ ಆಶಾ ಎಂಬವರಿಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಬಡಗುಪೇಟೆಯಲ್ಲಿರುವ ಅಭಿವೃದ್ಧಿ ಸೌಹರ್ದ ಕ್ರೆಡಿಟ್ ಕೋ-ಆಪರೇಟಿವ್ (ಲಿ) ನಲ್ಲಿ ಅವರುಗಳು ಪಡೆದ ತಲಾ ರೂ. 1,00,000/- ಸಾಲಕ್ಕೆ ಜಾಮೀನುದಾರರಾಗಿರುತ್ತಾರೆ.
ಈ ಸಾಲದ ವಿಚಾರವಾಗಿ ಕ್ರಷ್ಣ ವೇಣಿ ರವರು ಹಾಗೂ ಆರೋಪಿತೆ ಭಾರತಿ ಸುವರ್ಣ ರವರ ನಡುವೆ ಸಾಲ ಕೊಟ್ಟಿದೆ ಇರುವ ಬಗ್ಗೆ ಜಗಳ ಇರುತ್ತದೆ. ಮುಂದುವರೆದು ದಿನಾಂಕ 18/12/2025 ರಂದು ಆರೋಪಿತೆ ಭಾರತಿ ಸುವರ್ಣ ರವರು ಏಕಾಏಕಿ ಕ್ರಷ್ಣ ವೇಣಿ ರವರು ಕೆಲಸ ಮಾಡುವ ಮೂಕಾಂಬಿಕ ಸೊಸೈಟಿಗೆ ಬಂದು ಕ್ರಷ್ಣ ವೇಣಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು , ನಿಂದಿಸಿ ಮತ್ತು ದೈಹಿಕ ಹಲ್ಲೆ ನಡೆಸಿರುತ್ತಾರೆ ಹಾಗೂ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ.
ನಂತರ ಕ್ರಷ್ಣ ವೇಣಿ ರವರು ಕುಳಿತಿದ್ದ ಕುರ್ಚಿಯಿಂದ ಅವರನ್ನು ಎಳೆದು ನೆಲಕ್ಕೆ ಹಾಕಿ ಹಲ್ಲೆ ನಡೆಸಿರುತ್ತಾರೆ. ಕ್ರಷ್ಣ ವೇಣಿ ರವರು ಎದ್ದು ಪುನಃ ಕುರ್ಚಿಯಲ್ಲಿ ಕುಳಿತಾಗ ಕೆನ್ನೆಗೆ, ಬೆನ್ನಿಗೆ ಹಲ್ಲೆ ನಡೆಸಿ ಕ್ರಷ್ಣ ವೇಣಿ ರವರನ್ನು ಪುನಃ ನೆಲಕ್ಕೆ ಬೀಳಿಸಿ ಕುತ್ತಿಗೆಯನ್ನು ಒತ್ತಿ ಹಿಡಿದಿರುತ್ತಾರೆ. ಈ ಹಲ್ಲೆಯನ್ನು ಆರೋಪಿತೆ ಭಾರತಿ ಸುವರ್ಣ ರವರು ಇತರೇ ಅರೋಪಿತರುಗಳಾದ ವನಜಾಕ್ಷಿ ಪಾರ್ವತಮ್ಮ, ಶೀತಲ್ ಭಟ್, ಹರೀಶ್ ಭಟ್ ಮತ್ತು ಗಣೇಶ್ ರಾಜ್ ರವರ ಪಿತೂರಿ ಹಾಗೂ ಕುಮ್ಮಕ್ಕಿನಂತೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 115(2) 118(1) 352 351(2) 49 ಜೊತೆಗೆ 190 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
