ದಿನಾಂಕ:12-01-2026(ಹಾಯ್ ಉಡುಪಿ ನ್ಯೂಸ್)
ಕಾಪು: ದಿನಾಂಕ 11-1-2026ರಂದು ಕಾಪುವಿನ ದಂಡತೀರ್ಥ ಮೈದಾನದಲ್ಲಿ ಮೈತ್ರಿ ಅಶ್ರಫ್ ರವರ ನೇತೃತ್ವದಲ್ಲಿ BFC Cricketers ಆಯೋಜಿಸಿದ್ದ Area wise ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭರ್ಜರಿಯಾಗಿ ಯಶಸ್ವಿಯಾಯಿತು.
ಫೈನಲ್ ನಲ್ಲಿ B ಟೀಮ್ ತಂಡವು ಜನಪ್ರಿಯ ತಂಡವನ್ನು ಸೋಲಿಸಿ ಪ್ರತಿಷ್ಠಿತ BFC ಟ್ರೋಫಿ ಸೀಸನ್ 1 ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಜನಪ್ರಿಯ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದು ಕೊಂಡಿತು.
ಈ ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಜನಪ್ರಿಯ ಫ್ರೆಂಡ್ಸ್ ತಂಡವು ಎಲ್ಲರ ನಿರೀಕ್ಷೆಯ ಅಯನ್ ಕಾಪು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು ಮತ್ತೊಂದೆಡೆ B ಟೀಮ್ ತಂಡವು ಬಜಾರ್ ಫ್ರೆಂಡ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.
ಪಂದ್ಯಕೂಟದ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಇಬ್ರಾಹಿಂ, ಬೆಸ್ಟ್ ಬೌಲರ್ ಫಯಿಜ್, ಬೆಸ್ಟ್ ಆಲ್ರೌಂಡರ್ ಕಬೀರ್, ಬೆಸ್ಟ್ ಫೀಲ್ಡರ್ ಫೈಝಲ್, ದಿಟ್ಟ ಬ್ಯಾಟಿಂಗ್ ಹಾಗೂ ನಿಖರ ಬೌಲಿಂಗ್ ಮೂಲಕ ತೇಜುರವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಆಟಗಾರರಿಗೆ ಊಟದ ವ್ಯವಸ್ಥೆ ಹಾಗೂ ಊರಿನ ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.
.
.
