images-12.jpeg
Spread the love

ಮಣಿಪಾಲ : ದಿನಾಂಕ: 09-01-2025 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ತಲ್ಲೂರು ವೈನ್ಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ಶೀನಾ ಸಾಲ್ಯಾನ್ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ಶೀನಾ ಸಾಲ್ಯಾನ್‌ ಅವರು ದಿನಾಂಕ:09/01/2026 ರಂದು ಬೆಳಿಗ್ಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ತಲ್ಲೂರು ವೈನ್ಸ್ ಬಳಿ, ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ಮದ್ಯ ಸೇವನೆ ಮಾಡುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದಂತೆ  ಮಾಹಿತಿ ಬಂದ ಸ್ಥಳಕ್ಕೆ  ದಾಳಿ ಮಾಡಿದ್ದಾರೆ.

ದಾಳಿಯ ವೇಳೆ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಥರ್ವ್ ವಿದ್ಯಾಸಾಗರ್ ಲೆಮೆಯೇ (19 ವರ್ಷ)  ವಾಸ:  ಶ್ರೀ ರಾಮ ಸ್ಮಿರ್ತಿ ಅತ್ತಿಬೆಲೆ, ಸರ್ಜಾಪುರ ರಸ್ತೆ, ಬಿಇಎಂಎಲ್ ಬಡಾವಣೆ, ಬದರಗುಪ್ಪೆ, ಬೆಂಗಳೂರು  2.ರುಪ್ಸಾ ಸೇನ್ ಗುಪ್ತಾ (21 ವರ್ಷ)  ವಾಸ: ಅಮರ್ ಪಾಲಿ ಗ್ರಾಮ, ಇಂದಿರಾಪುರ ತಾಲೂಕು, ಗಾಜಾಬಾದ್ ಜಿಲ್ಲೆ, ಉತ್ತರಪ್ರದೇಶ ರಾಜ್ಯ  ಎಂದು ತಿಳಿಸಿರುತ್ತಾರೆ.

ಆರೋಪಿಗಳು ಈರ್ವರು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾರೆ.ಮದ್ಯಪಾನ ಮಾಡಿರುವ ಸ್ಥಳವನ್ನು ಪೊಲೀಸರು ಪರಿಶೀಲಿಸಿದಾಗ MUSCOVY ORANGE Vodka ಎಂಬ ಹೆಸರಿನ 180 ml ನ ಖಾಲಿ ಬಾಟಲಿ-1, ಖಾಲಿ ಗ್ಲಾಸ್ -1, ಕೊಕಾ ಕೋಲಾ ಎಂಬ ಹೆಸರಿನ ತಂಪು ಪಾನಿಯ 750 ಎಂಎಲ್ -1, ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದಾರೆ.

ಅಥರ್ವ್ ವಿದ್ಯಾಸಾಗರ್ ಲೆಮೆಯೇ ಹಾಗೂ ರುಪ್ಸಾ ಸೇನ್ ಗುಪ್ತಾರವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 09/2026 ಕಲಂ: 15(A) KE Act ರಂತೆ ಪ್ರಕರಣ ದಾಖಲಾಗಿದೆ.

error: No Copying!