IMG-20230719-WA0016.jpg
Spread the love

ಉಡುಪಿ: ದಿನಾಂಕ : 10-01-2026(ಹಾಯ್ ಉಡುಪಿ ನ್ಯೂಸ್) ಹಣಕಾಸಿನ ಸಮಸ್ಯೆ ಇದ್ದಾಗ ಪರಿಚಯದವರಲ್ಲಿ ಕೈ ಸಾಲ ಪಡೆದು ಕೊಂಡಿದ್ದು, ಸಾಲ ಕೊಟ್ಟವರು ಆ ನಂತರ ಹಲವಾರು ರೀತಿಯಲ್ಲಿ ಸಾಲದ ಹಣವನ್ನು ವಾಪಾಸು ಪಡೆದು ಕೊಂಡಿದ್ದು,ಇದೀಗ ಇನ್ನೂ ಹೆಚ್ಚಿನ ಬಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಕಟಪಾಡಿ ನಿವಾಸಿ ಡ್ಯಾನಿ ರೋಕಿ ಸಲ್ದಾನ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಟಪಾಡಿ ಮೂಡಬೆಟ್ಟು ನಿವಾಸಿ ಡ್ಯಾನಿ ರೋಕಿ ಸಲ್ಡಾನ (50)   ಎಂಬವರು  2019 ನೇ ಇಸವಿಯಲ್ಲಿ ಹಣಕಾಸಿನ ತೊಂದರೆಯಲ್ಲಿದ್ದಾಗ ಅವರ ಸ್ನೇಹಿತರಾದ ಉಡುಪಿ ತಾಲೂಕು ಬಡಗುಬೆಟ್ಟುವಿನಲ್ಲಿ ವಾಸಮಾಡಿಕೊಂಡಿರುವ ಆರೋಪಿಗಳಾದ ಸುಕೇಶ್ ರಾವ್ ಮತ್ತು ಆಕಾಶ್ ರಾವ್ ಎಂಬವರಲ್ಲಿ 15,00,000/- ಹಣ ಸಾಲವನ್ನು ಪಡೆದುಕೊಂಡಿರುತ್ತಾರೆ. ಡ್ಯಾನಿ ರೋಕಿ ಸಲ್ದಾನರವರು ಪಡೆದುಕೊಂಡ ಸಾಲದ ಹಣವನ್ನು ತೀರಿಸುತ್ತಿದ್ದಾಗ ಆರೋಪಿಗಳು ಡ್ಯಾನಿ ರೋಕಿ ಸಲ್ದಾನರವರನ್ನು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ , ಉಡುಪಿ ಶಾಖೆಗೆ ಕರೆದುಕೊಂಡು ಹೋಗಿ ಡ್ಯಾನಿ ರೋಕಿ ಸಲ್ದಾನರವರ ಹೆಸರಿನಲ್ಲಿರುವ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಯನ್ನು 50,00,000/- ಲಕ್ಷ ರೂಪಾಯಿಗಳಿಗೆ ಅಡಮಾನ ಮಾಡಿ 35,00,000/- ಲಕ್ಷ ಹಣವನ್ನು ಡ್ಯಾನಿ ರೋಕಿ ಸಲ್ದಾನರವರು  ಈಗಾಗಲೇ ಪಡೆದುಕೊಂಡಿದ್ದ 15,00,000/- ರೂಪಾಯಿಗಳಿಗೆ ಬಡ್ಡಿಯ ರೂಪದಿಂದ ಪಡೆದುಕೊಂಡಿರುತ್ತಾರೆ.

ಹೀಗಿರುವಾಗ ಆರೋಪಿ ಸುಕೇಶ್ ರಾವ್ ನು ಡ್ಯಾನಿ ರೋಕಿ ಸಲ್ದಾನರವರಿಗೆ ಹಣದ ಅವಶ್ಯಕತೆ ಇರದಿದ್ದರೂ ಕೂಡ ಹಲವು ಬಾರಿ ಡ್ಯಾನಿ ರೋಕಿ ಸಲ್ದಾನರವರ ಹೆಸರಿನಲ್ಲಿ ಗ್ರೂಫ್ ಫಂಡ್ ನಿಂದ ಹಣ ಪಡೆದುಕೊಂಡು , ಡ್ಯಾನಿ ರೋಕಿ ಸಲ್ದಾನರವರಿಗೆ  ಹಂತ-ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಒತ್ತಡ ಹಾಕಿರುತ್ತಾನೆ.

2021 ನೇ ಇಸವಿಯಲ್ಲಿ ಸುಕೇಶ್ ರಾವ್ ನು ಬಲ್ಲಾಳ್ ಫೈನಾನ್ಸ್ ನಿಂದ ಡ್ಯಾನಿ ರೋಕಿ ಸಲ್ದಾನರವರ  ಖಾತೆಗೆ 14,00,000/- ಲಕ್ಷ ಹಣವನ್ನು ಸಾಲ ನೀಡಿರುತ್ತಾರೆ. ಡ್ಯಾನಿ ರೋಕಿ ಸಲ್ದಾನರವರು ಈ ಸಾಲದ ಹಣವನ್ನು ತೀರಿಸಲು ದಿವ್ಯ ಸೌಹರ್ಧ ಸೊಸೈಟಿ, ಕಟಪಾಡಿ ಯಲ್ಲಿ ಸಾಲವನ್ನು ತೆಗೆದು ದಿನಾಂಕ 18/10/2023 ರಂದು ಯೂನಿಯನ್ ಬ್ಯಾಂಕ್ ಮುಖಾಂತರ ಬಲ್ಲಾಳ್ ಫೈನಾನ್ಸ್ ಗೆ ವಾಪಸ್ಸು ಮಾಡಿರುತ್ತಾರೆ.

ಈ  ಸಾಲದ ಹಣಕ್ಕೆ ಡ್ಯಾನಿ ರೋಕಿ ಸಲ್ದಾನರವರು  ಆರೋಪಿ ಸುಕೇಶ್ ರಾವ್ ರವರಿಗೆ ತಿಂಗಳೊಂದರ ಬಡ್ಡಿ 1,12,000/- ರೂಪಾಯಿಯನ್ನು ನಗದಾಗಿ ನೀಡಿರುತ್ತಾರೆ.

ಡ್ಯಾನಿ ರೋಕಿ ಸಲ್ದಾನರವರು  ಸಾಲದ ಹಣವನ್ನು ನೀಡಿದಾಗ್ಯೂ ಆರೋಪಿ ಸುಕೇಶ್ ರಾವ್ ಡ್ಯಾನಿ ರೋಕಿ ಸಲ್ದಾನರವರಿಗೆ ಫೋನ್ ಕರೆ ಮಾಡಿ ಮೀಟರ್ ಬಡ್ಡಿಯ ಲೆಕ್ಕಚಾರವನ್ನು ಮಾಡಿ ಬಡ್ಡಿ ಹಣವನ್ನು ಕಟ್ಟಲು ಒತ್ತಾಯ ಹಾಕಿ ಡ್ಯಾನಿ ರೋಕಿ ಸಲ್ದಾನರವರಿಂದ ದಿನಾಂಕ 18/10/2023 ರಿಂದ 07/08/2024 ರ ನಡುವೆ ಬೇರೆ–ಬೇರೆ ಖಾತೆಗಳಿಗೆ ರೂ 26,39,000/- ರೂಪಾಯಿ ವರ್ಗಾವಣೆ ಮಾಡಿಸಿರುತ್ತಾನೆ.

ಇದಾದ ನಂತರ ಆರೋಪಿ ಸುಕೇಶ್ ರಾವ್ ತನ್ನ ತಾಯಿ ನಯನಾ ರಾವ್ ಹೆಸರಿನಲ್ಲಿ ಡ್ಯಾನಿ ರೋಕಿ ಸಲ್ದಾನರವರ ಜಾಗ 20,00,000/- ರೂಪಾಯಿಗಳಿಗೆ ಮಾರಾಟ ಆಗಿದೆ ಎಂಬುದಾಗಿ ಒಂದು ಸುಳ್ಳು ಕರಾರು ಒಪ್ಪಂದ ಪತ್ರ ತಯಾರಿಸಿ ದಿನಾಂಕ 15/05/2024 ಮತ್ತು ದಿನಾಂಕ 23/05/2024 ರಂದು ಡ್ಯಾನಿ ರೋಕಿ ಸಲ್ದಾನರವರ  ಖಾತೆಗೆ ಒಟ್ಟು 9,60,000/- ಲಕ್ಷ ರೂಪಾಯಿ ವರ್ಗಾವಣೆ ಮಾಡಿ ಅದೇ ದಿನ ಡ್ಯಾನಿ ರೋಕಿ ಸಲ್ದಾನರವರ  ಹಣವನ್ನು ವಾಪಸ್ಸು ಪಡೆದುಕೊಂಡಿರುತ್ತಾರೆ.

ನಂತರ ಆರೋಪಿ ಸುಕೇಶ್ ರಾವ್ ನು ಡ್ಯಾನಿ ರೋಕಿ ಸಲ್ದಾನರವರಿಗೆ  ಪದೇ-ಪದೇ ಫೋನ್ ಕರೆ ಮಾಡಿ ಬಡ್ಡಿ ಸಾಲವನ್ನು ಪಾವತಿಸುವಂತೆ ತಿಳಿಸಿ ಪುನಃ 19,45,510/-,2,06,500/- ಮತ್ತು 3,71,800/- ರೂಪಾಯಿಗಳನ್ನು ಬೇರೆ-ಬೇರೆ ಖಾತೆಗಳಿಗೆ ವರ್ಗಾವಣೆಮಾಡಿಕೊಂಡಿರುತ್ತಾನೆ.

ಪುನಃ ಆರೋಪಿ ಸುಕೇಶ್ ರಾವ್ ನು  ಡ್ಯಾನಿ ರೋಕಿ ಸಲ್ದಾನರವರಿಗೆ  ಸಾಲದ ಬಡ್ಡಿ ಹಣ ಕೊಡಲು ಬಾಕಿ ಇದೆ ಎಂದು ಹೇಳಿ ಡ್ಯಾನಿ ರೋಕಿ ಸಲ್ದಾನರವರಿಂದ ಸಾಲದ ಬಡ್ಡಿಯ ಹಣಕ್ಕಿಂತ ಹೆಚ್ಚಿನ ಬಡ್ಡಿ ಹಣವನ್ನು ಪಡೆದು, ಈಗ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿ ಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 308(5) ಜೊತೆಗೆ 3(5) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!