ಕೋಟ: ದಿನಾಂಕ: 05/01/2026 (ಹಾಯ್ ಉಡುಪಿ ನ್ಯೂಸ್) ಮಣೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಲಕ್ಕಿ ಡ್ರಾ ಎಂಬ ಜುಗಾರಿ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಅವರಿಗೆ ದಿನಾಂಕ : 04-01-2026 ರಂದು ಬ್ರಹ್ಮಾವರ ತಾಲೂಕು, ಮಣೂರು ಗ್ರಾಮದ ಇಂದ್ರಪ್ರಸ್ಥ ಹೊಟೇಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ವಾಟ್ಸ್ ಅಪ್ ನಲ್ಲಿ ಗ್ರೂಪ್ ಮಾಡಿಕೊಂಡು ಹಣವನ್ನು ಪಡೆದು ಕಾಯಿನ್ ಗಳನ್ನು ಆರಿಸಿ, ಲಕ್ಕಿ ಡ್ರಾ ಎಂಬ ಜುಗಾರಿ ಆಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ದಾಳಿಸಿ ನಡೆಸಿ ಜುಗಾರಿ ಆಡುತ್ತಿದ್ದ 1) ರಮೇಶ (35), ಪಾರಂಪಳ್ಳಿ ಗ್ರಾಮ, ಸಾಲಿಗ್ರಾಮ , 2) ಶ್ರೀನಿವಾಸ (36), ಗುಂಡ್ಮಿ ಗ್ರಾಮ, ಬ್ರಹ್ಮಾವರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅವರುಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹ್ಯಾಂಡ್ ಸೆಟ್ ಗಳು – 2, ನಗದು ರೂಪಾಯಿ 5,500/-, ಡಬ್ಬಿ ಹಾಗೂ ಅದರಲ್ಲಿರುವ ಕಾಯಿನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 78 KP Act ರಂತೆ ಪ್ರಕರಣ ದಾಖಲಾಗಿದೆ.
