unnamed.jpg
Spread the love

ಬ್ರಹ್ಮಾವರ: ದಿನಾಂಕ:01-01-2026 (ಹಾಯ್ ಉಡುಪಿ ನ್ಯೂಸ್) ಚೇರ್ಕಾಡಿ ಗ್ರಾಮದ ವ್ಯಕ್ತಿ ಯೋರ್ವರಿಗೆ ಕೋಳಿ ಫಾರಂ ನಿರ್ಮಾಣ ಮಾಡಿ ಕೊಡುವುದಾಗಿ ನಂಬಿಸಿ ಹಣ ಪಡೆದು ಕೊಂಡ ರಾಘವೇಂದ್ರ ಎಂಬವನು ಇದೀಗ ವಂಚನೆ ನಡೆಸಿದ್ದಾನೆ ಎಂದು ಮೋಸ ಹೋದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ

ಚೇರ್ಕಾಡಿ ಗ್ರಾಮದ ನಿವಾಸಿ ಹರ್ಷ ಎಂಬವರಿಗೆ ಆರೋಪಿ ರಾಘವೆಂದ್ರ ಎಸ್‌ ಎಂಬವರು ಪರಿಚಯಸ್ಥರಾಗಿದ್ದು, ಹರ್ಷ ರವರು ಚೇರ್ಕಾಡಿ ಗ್ರಾಮದ, ಕೆನರಾ ಬ್ಯಾಂಕ್‌  ಪೇತ್ರಿ ಶಾಖೆಯಿಂದ ಕೋಳಿ ಫಾರಂ ನಿರ್ಮಾಣದ ಬಗ್ಗೆ ಸಾಲ ಪಡೆದು ಕೋಳಿ ಫಾರಂಗೆ ಬೇಕಾಗುವ ಸಾಮಾಗ್ರಿ ಸಲಕರಣೆಯ ಖರೀದಿಯ ಸಲುವಾಗಿ  ಆರೋಪಿ ರಾಘವೇಂದ್ರ ಎಸ್ ನೊಂದಿಗೆ ಮಾತುಕತೆ ನಡೆಸಿ ಆರೋಪಿ ರಾಘವೇಂದ್ರ ನು ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಉಪಕರಣಗಳನ್ನು 25 ದಿವಸದ ಒಳಗೆ ಸರಬರಾಜು ಮಾಡುವುದಾಗಿ ಕೊಟೇಶನ್‌ ನೀಡಿದ್ದು, ಅದರಂತೆ ಹರ್ಷರವರು ಆರೋಪಿಯ ಬ್ಯಾಂಕ್‌ ಖಾತೆಗೆ ತನ್ನ ಬ್ಯಾಂಕ್‌ ಖಾತೆಯಿಂದ ರೂಪಾಯಿ 2,11,300/- ಹಣವನ್ನು ವರ್ಗಾಯಿಸಿದ್ದಾರೆ.

ಆದರೆ ಆರೋಪಿ ರಾಘವೇಂದ್ರ ನು ತಾನು ಪಡೆದುಕೊಂಡ ಹಣಕ್ಕೆ ಯಾವುದೇ ಸಾಮಾಗ್ರಿಗಳನ್ನು ಪೂರೈಸದೇ ಹಾಗೂ ಪಡೆದ ಹಣವನ್ನು ಮರುಪಾವತಿಸದೇ ಹರ್ಷ ರವರಿಗೆ ಮೋಸ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

 ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 318(4), 316(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!