ಮಣಿಪಾಲ: ದಿನಾಂಕ: 28-12-2025(ಹಾಯ್ ಉಡುಪಿ ನ್ಯೂಸ್) ಮುಂಬೈನಿಂದ ಉಡುಪಿಗೆ ಮತ್ಸ್ಯ ಗಂಧ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಯೋವೃದ್ಧ ಮಹಿಳೆಯೋರ್ವರ ಚಿನ್ನಾಭರಣ ವಿದ್ದ ಬ್ಯಾಗನ್ನು ಯಾರೋ ಕಳ್ಳತನ ನಡೆಸಿರುವ ಘಟನೆ ಮುರುಡೇಶ್ವರ ರೈಲು ನಿಲ್ದಾಣ ಸನಿಹ ನಡೆದಿದೆ.
ಮಹಾರಾಷ್ಟ್ರ,ಮುಂಬೈ ಚೆಂಬೂರು ನಿವಾಸಿ ಹೆಲ್ಮೀನಾ ಸಾಲಿನ್ಸ್ (78) ಎಂಬವರು ತಮ್ಮ ಮಗಳು, ಗಂಡ ಮತ್ತು ಮೊಮ್ಮಗಳೊಂದಿಗೆ ದಿನಾಂಕ:26.12.2025 ರಂದು ಮದ್ಯಾಹ್ನ ಮತ್ಸ್ಯಗಂಧ ರೈಲ್ ನಂಬ್ರ 12619 Coach ರಲ್ಲಿ ತಮ್ಮ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್ , ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್ ಕೇಸ್‌ಗಳೊಂದಿಗೆ ಉಡುಪಿಗೆ ಪ್ರಯಾಣಿಸುತ್ತಿದ್ದು ಹೆಲ್ಮೀನಾ ಸಾಲಿನ್ಸ್ ಅವರು ಒಡವೆಗಳಿದ್ದ ವ್ಯಾನಿಟಿ ಬ್ಯಾಗನ್ನು ತನ್ನ ತಲೆಯ ಬಳಿ ಇರಿಸಿ ರಾತ್ರಿ ರೈಲಿನಲ್ಲಿ ಮಲಗಿದ್ದು ದಿನಾಂಕ:27.12.2025 ರಂದು ಬೆಳಿಗ್ಗೆ ಸಮಯ ಮುರುಡೇಶ್ವರ ರೈಲ್ವೆ ನಿಲ್ದಾಣ ಪಾಸಾಗುವಾಗ ಹೆಲ್ಮೀನಾ ಸಾಲಿನ್ಸ್ ಅವರ ಮಗಳು ಬೆಳಿಗ್ಗೆ ಹಲ್ಲು ಉಜ್ಜಲು ಬ್ರೆಷ್ ಹಾಗೂ ಪೇಸ್ಟ್ ತೆಗೆಯಲು ಬ್ಯಾಗನ್ನು ನೋಡಿದ್ದು ಬ್ಯಾಗ್ ಹೆಲ್ಮೀನಾ ಸಾಲಿನ್ಸ್ ಅವರ ತಲೆಯ ಬಳಿ ಇರದೇ ರೈಲ್ವೆ ಟೀ ಟೇಬಲ್ ಬಳಿ ಇದ್ದು ಬ್ಯಾಗನ್ನು ಪರೀಶೀಲಿಸಿದಾಗ ಅದರಲ್ಲಿದ್ದ 408 ಗ್ರಾಂ ಚಿನ್ನದ ಆಭರಣಗಳು ಒಟ್ಟು ಮೌಲ್ಯ 45,80,000/- ಹಾಗೂ ನಗದು ಹಣ 15,000/- ರೂಗಳನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 305(c) BNS ರಂತೆ ಪ್ರಕರಣ ದಾಖಲಾಗಿದೆ.
