ಉಡುಪಿ: ದಿನಾಂಕ:28-12-2025(ಹಾಯ್ ಉಡುಪಿ ನ್ಯೂಸ್)
ನಮ್ಮ ದೇಶದ ಜನಸಾಮಾನ್ಯರಿಗೆ ಮೋಸ ಮಾಡಿದಂತಹ
ಈ ಬಿಜೆಪಿ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ, ಪಕ್ಷದ ಗ್ಯಾರಂಟಿ ಯೋಜನೆ ವಿರುದ್ಧ ಮಾತನಾಡುವಂತಹ ನೈತಿಕತೆ ಇದೆಯಾ?ಡೋಂಗಿ ಬಿಜೆಪಿ ನಾಯಕರೇ ಉತ್ತರಿಸಿ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ ಮಾಡಿದ್ದಾರೆ .
ರಾಜ್ಯದ ಬಿಜೆಪಿಯ ನಾಯಕರುಗಳಾದ ಅಶೋಕ್ ಮತ್ತು ವಿಜಯೇಂದ್ರ ಇವರು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರೆಂಟಿಗಳಲ್ಲಿ ಒಂದಾದ ಗ್ರಹಲಕ್ಷ್ಮಿ ಹಣ ಎರಡು ತಿಂಗಳಲ್ಲಿ ಕೊಡಲಿಲ್ಲ ಎಂಬುದರ ಬಗ್ಗೆ ಬಹಳ ದೊಡ್ಡದಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ .ಬಿಜೆಪಿ ನಾಯಕರೇ ನಿಮಗೆ ಇದರ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯಾ? ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ಟೀಕಿಸಿ ಅಣಕಿಸಿದಂತ ನಿಮಗೆ ಇದರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ,
ಈ ಎರಡು ತಿಂಗಳ ಹಣವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಜನಸಾಮಾನ್ಯರಿಗೆ ನೀಡುತ್ತದೆ .ಇದರ ಬಗ್ಗೆ ನಿಮ್ಮ ಪ್ರತಿಭಟನೆ ಅಗತ್ಯ ಇಲ್ಲ. ನಿಮ್ಮ ಪ್ರತಿಭಟನೆ ಏನಿದ್ದರೂ ಕೇಂದ್ರದ ಮೋದಿ ಸರಕಾರದ ವಿರುದ್ಧ ಇರಲಿ. ಕಳೆದ ಹತ್ತು ವರ್ಷದಲ್ಲಿ ಜನಸಾಮಾನ್ಯರು ಬಳಸುವಂತಹ ಅಡುಗೆ ಅನಿಲದ ಸಬ್ಸಿಡಿಯನ್ನು ನೀಡದೆ ಮೋದಿಯ ಬಿಜೆಪಿ ಸರಕಾರ ಮೋಸ ಮಾಡಿದೆ.
ಈ ಲಕ್ಷಾಂತರ ಕೋಟಿ ಹಣ ಎಲ್ಲಿ ಹೋಗಿದೆ ?ಎಂಬುದರ ಬಗ್ಗೆ ಪ್ರಪ್ರಥಮವಾಗಿ ಜನಸಾಮಾನ್ಯರಿಗೆ ತಿಳಿಸಿ. ಅದನ್ನು ಬಿಟ್ಟು ರಾಜ್ಯದ ಮಹಿಳಾ ಸಚಿವರ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ. ಜನಸಾಮಾನ್ಯರಿಗೆ ನೀವು ಮಾಡುತ್ತಿರುವ ಮೋಸದ ಬಗ್ಗೆಯೂ ಸ್ವಲ್ಪ ತಿಳಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
