unnamed.webp
Spread the love

ಕಾರ್ಕಳ: ದಿನಾಂಕ :25-12-2025(ಹಾಯ್ ಉಡುಪಿ ನ್ಯೂಸ್)  ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದ ವ್ಯಕ್ತಿ ಗೆ ಬುದ್ಧಿ ಮಾತು ಹೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹೊಸ್ಮಾರು ನಲ್ಲಿ ನಡೆದಿದೆ.

ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರು ಪೊಲೀಸ್ ಚೌಕಿ ಬಳಿ ನಿವಾಸಿ  ಮೊಹಮ್ಮದ್‌ ಸಾದಿಕ್‌ (19) ಹಾಗೂ ಇವರ ತಂದೆ ಮೊಹಮ್ಮದ್‌ರವರು ಸಾದಿಕ್ ಅವರ ಮಾವ ಹನೀಫ್ ಎಂಬವರಲ್ಲಿಗೆ ದಿನಾಂಕ:24-12-2025 ರಂದು ಮಧ್ಯಾಹ್ನ ತೆರಳಿ ಅವರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಹನೀಫ್ ರವರಲ್ಲಿ ವಿಚಾರಿಸಿ ಬುದ್ದಿವಾದ ಹೇಳುವಾಗ, ಹನೀಫ್ ನು ಮೊಹಮ್ಮದ್ ಸಾದಿಕ್ ಅವರ ತಂದೆಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರ ಹೊಟ್ಟೆಗೆ ಹೊಡೆದುದಲ್ಲದೆ, ತಡೆಯಲು ಹೋದ ಮೊಹಮ್ಮದ್ ಸಾದಿಕ್ ಅವರ ತಲೆಗೆ ವೀಲ್ ಬಾಕ್ಸ್ ರಾಡ್ ನಿಂದ ಹೊಡೆದು ಗಾಯಗೊಳಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕಲಂ:  115(2) 118(1) 352, ಭಾರತೀಯ ನ್ಯಾಯ ಸಂಹಿತೆ ರಂತೆ ಪ್ರಕರಣ ದಾಖಲಾಗಿದೆ.

error: No Copying!