istockphoto-1207748595-612x612.jpg
Spread the love

ಪಡುಬಿದ್ರಿ: ದಿನಾಂಕ:15-12-2025(ಹಾಯ್ ಉಡುಪಿ ನ್ಯೂಸ್) ನಡ್ಸಾಲು ಗ್ರಾಮದ ಮಹಾದೇವಿ ಟೂರಿಸ್ಟ್ ಹೋಮ್ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಅಡ್ಡೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಇಬ್ಬರು ಪಿಂಪ್ ಗಳನ್ನು ಬಂಧಿಸಿದ್ದಾರೆ.

ನಡ್ಸಾಲು ಗ್ರಾಮದ ರಾ.ಹೆ 66 ರ ಪಕ್ಕದಲ್ಲಿರುವ ಮಹಾದೇವಿ  ಟೂರಿಸ್ಟ್‌‌ ಹೋಮ್‌ ಎಂಬ ಕಟ್ಟಡದಲ್ಲಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಪುಸಲಾಯಿಸಿ ಕಳ್ಳಸಾಗಾಣಿಕೆ ಮಾಡಿ ವೈಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ದಿನಾಂಕ:14-12-2025 ರಂದು  ಪಡುಬಿದ್ರಿ ಪೊಲೀಸರಿಗೆ ಮಾಹಿತಿ ಬಂದಿದ್ದು ಕೂಡಲೇ ಪೊಲೀಸರು ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .

ಪೊಲೀಸರು ದಾಳಿ ನಡೆಸಿದಾಗ ಟೂರಿಸ್ಟ್ ಹೋಮ್ ನಲ್ಲಿದ್ದ ಸಂತೃಸ್ಥ ಇಬ್ಬರು  ಮಹಿಳೆಯರನ್ನು ರಕ್ಷಿಸಿದ್ದಾರೆ.ಮಹಿಳೆಯರನ್ನು ಕಳ್ಳ ಸಾಗಾಣಿಕೆ ಮಾಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳಾದ ಯತಿರಾಜ್‌ ಪೊಲ್ಯ ಶೆಟ್ಟಿ ಮತ್ತು ನವೀನ್ ಪೂಜಾರಿಯ ನ್ನು ಪೊಲೀಸರು ಬಂಧಿಸಿದ್ದಾರೆ.

ಈ  ಬಗ್ಗೆ  ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ  ಕಲಂ: 143 ಬಿಎನ್‌ಎಸ್, ಕಲಂ 3(1), 4, 5 Immoral Traffic Prevention Act 1956 ರಂತೆ ಪ್ರಕರಣ ದಾಖಲಾಗಿದೆ.

error: No Copying!